Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಎಟಿಎಂ ಕಾರ್ಡ್ ನಿಂದಲ್ಲ, ಮೊಬೈಲ್ ನಿಂದ ಬರುತ್ತೆ ಹಣ

$
0
0
ಎಟಿಎಂ ಕಾರ್ಡ್ ನಿಂದಲ್ಲ, ಮೊಬೈಲ್ ನಿಂದ ಬರುತ್ತೆ ಹಣ

ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಅತಿ ವೇಗದಲ್ಲಿ ಬೆಳೆಯುತ್ತಿದೆ. ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಸುದ್ದಿ ಉತ್ತಮ ಉದಾಹರಣೆ. ಈಗ ಹಣ ಪಡೆಯಲು ಎಟಿಎಂ ಕಾರ್ಡ್ ಬೇಕಾಗಿಲ್ಲ. ಮೊಬೈಲ್ ಫೋನ್ ನಲ್ಲಿಯೇ ಹಣ ಡ್ರಾ ಮಾಡಬಹುದು.

ಯಸ್, ಸದ್ಯ ಅಮೆರಿಕಾದ ಜನರು ಈ ಹೊಸ ಹಾಗೂ ವಿಭಿನ್ನ ರೀತಿಯಲ್ಲಿ ಎಟಿಎಂ ಬಳಸ್ತಿದ್ದಾರೆ. 2000 ಯಂತ್ರಗಳನ್ನು ಅಮೆರಿಕಾದಲ್ಲಿ ಅಳವಡಿಸಲಾಗಿದೆ. ಆ ಯಂತ್ರಗಳಿಗೆ ಎಟಿಎಂ ಕಾರ್ಡ್ ಬೇಕಾಗಿಲ್ಲ. ನಿಮ್ಮ ಮೊಬೈಲ್ ನಲ್ಲಿ ಒಂದು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ್ರೆ ಸಾಕು. ಆ ಕೋಡ್ ಬಳಸಿ ಎಟಿಎಂ ನಿಂದ ಸುಲಭವಾಗಿ ಹಣ ಡ್ರಾ ಮಾಡಬಹುದಾಗಿದೆ. ಈ ತಂತ್ರಜ್ಞಾನದ ಇನ್ನೊಂದು ವಿಶೇಷವೆಂದ್ರೆ ಕೇವಲ 10 ಸೆಕೆಂಡುಗಳಲ್ಲಿ ನೀವು ಹಣ ಡ್ರಾ ಮಾಡಬಹುದಾಗಿದೆ.

ಎಫ್ ಐ ಎಸ್ ಗ್ಲೋಬಲ್ ಹೆಸರಿನ ಸಾಫ್ಟ್ವೇರ್ ಕಂಪನಿ ಎಟಿಎಂ ದುನಿಯಾದಲ್ಲಿ ಹೊಸ ಕ್ರಾಂತಿ ಮಾಡಿದೆ. ಅಮೆರಿಕಾದ ಅನೇಕ ಬ್ಯಾಂಕುಗಳಿಗೆ ಇದೇ ಕಂಪನಿ ಸಾಫ್ಟ್ವೇರ್ ಒದಗಿಸುತ್ತಿದೆ. ಇಂತಹ ಎಟಿಎಂ ಗಳನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದೆ ಎಫ್ ಐ ಸಿ ಗ್ಲೋಬಲ್ ಕಂಪನಿ.


Viewing all articles
Browse latest Browse all 103032

Trending Articles