ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಯೋತ್ಪಾದಕರು ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸಿದ್ದಾರೆ.
ಸೇನಾ ಕೇಂದ್ರ ಕಛೇರಿಗೆ ಇಂದು ಮುಂಜಾನೆ 5-30 ರ ಸುಮಾರಿಗೆ ಪ್ರವೇಶಿಸಿರುವ ಭಯೋತ್ಪಾದಕರ ತಂಡದ ಪೈಕಿ ಒಬ್ಬಾತ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆಂದು ಹೇಳಲಾಗಿದೆ.
ಕಛೇರಿಯೊಳಗೆ ಇನ್ನೂ ಮೂವರು ಭಯೋತ್ಪಾದಕರು ಇರುವ ಶಂಕೆ ವ್ಯಕ್ತವಾಗಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಅವರುಗಳನ್ನು ಹೊಡೆದುರುಳಿಸಲು ಕಾರ್ಯಾಚರಣೆ ನಡೆಸಿದ್ದಾರೆ.