ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಅವರ ಒಂದೊಂದು ಸಿನಿಮಾಗಳು ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅಮಿತಾಬ್ ಬಚ್ಚನ್ ಅವರೂ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಅವರಿಗೆ ಟ್ವಿಟರ್ ನಲ್ಲಿ ಫಾಲೋವರ್ಸ್ ಗಳ ಸಂಖ್ಯೆ 2.1 ಕೋಟಿ ತಲುಪಿದೆ. ಅಭಿಮಾನಿಗಳ ಸಂಖ್ಯೆ ಟ್ವಿಟರ್ ನಲ್ಲಿ 2.1 ಕೋಟಿ ತಲುಪಿರುವುದಕ್ಕೆ ಅಮಿತಾಬ್ ಬಚ್ಚನ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ‘ಟ್ವಿಟ್ಟರ್ ನಲ್ಲಿ 21 ಮಿಲಿಯನ್ ಅಭಿಮಾನಿಗಳು. ನಿಮಗೆಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.
ವಿಭಿನ್ನ ಪಾತ್ರ, ಚಿತ್ರಗಳ ಮೂಲಕ ಅಭಿಮಾನಿಗಳ ಮೆಚ್ಚಿನ ನಟರಾಗಿರುವ ಅಮಿತಾಬ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ 2.1 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದು, 25 ಮಿಲಿಯನ್ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.