ಸ್ಯಾಂಡಲ್ ವುಡ್ ನಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಪ್ರಮುಖ ಸಿನಿಮಾ ನಟಿಯೊಬ್ಬರದ್ದೆನ್ನಲಾದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕನ್ನಡದ ಸುಮಾರು 5 ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಈ ನಟಿ, ತಮಿಳು ಚಿತ್ರರಂಗದಲ್ಲಿಯೂ ಮಿಂಚಿದ್ದಾರೆ. ತಮಿಳಿನ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿಯ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಟಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಸ್ಯಾಂಡಲ್ ವುಡ್ ನಟಿಯ ಈ ವಿಡಿಯೋ ಅಸಲಿಯೇ, ನಕಲಿಯೇ ಎಂಬುದು ಗೊತ್ತಾಗಿಲ್ಲವಾದರೂ, ನಟಿಯನ್ನೇ ಹೋಲುವ ರೀತಿ ಇರುವುದರಿಂದ ವಿಡಿಯೋ ವೈರಲ್ ಆಗಿದೆ. ನಟಿಯ ಇಮೇಜ್ ಗೆ ಧಕ್ಕೆ ತರಲು ಈ ಕೃತ್ಯ ಎಸಗಲಾಗಿದೆಯೋ ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.