ಬಳ್ಳಾರಿ: ಕಾಮುಕರು ಹೇಗೆಲ್ಲಾ ಇರುತ್ತಾರೆ. ಸಹೋದರಿಯನ್ನು ರಕ್ಷಿಸಬೇಕಾದ ಅಣ್ಣನೇ ಅಪ್ರಾಪ್ತ ವಯಸ್ಸಿನ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ನಗರದಲ್ಲಿ ಕಾಮುಕನೊಬ್ಬ, ತನ್ನ ಸಹೋದರಿಯನ್ನು ಬೆದರಿಸಿ, 6 ಬಾರಿ ಅತ್ಯಾಚಾರ ಎಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯೇ ತನ್ನ ಕಾಮುಕ ಪುತ್ರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 22 ವರ್ಷದ ಕಾಮುಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಸಹೋದರನ ನೀಚ ಕೃತ್ಯದ ಬಗ್ಗೆ ಯುವತಿ ತಾಯಿಗೆ ತಿಳಿಸಿದ್ದು, ತಾಯಿ ಬಳ್ಳಾರಿ ಠಾಣೆ ಪೊಲೀಸರಿಗೆ ಮಗನ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.