ಲಂಡನ್: ಮದ್ಯ ಪ್ರಿಯರ ಅಚ್ಚುಮೆಚ್ಚಿನ ವಿಸ್ಕಿಗಳಲ್ಲಿ ಒಂದಾದ ಸ್ಕಾಚ್ ವಿಸ್ಕಿಯ ಕುರಿತಾದ ಸುದ್ದಿಯೊಂದು ಇಲ್ಲಿದೆ. ಭಾರತ ಸ್ಕಾಚ್ ವಿಸ್ಕಿಯ ಪ್ರಮುಖ ಮಾರುಕಟ್ಟೆಯಾಗಿದೆ.
ಹೌದು, ವಿಶ್ವದಲ್ಲಿಯೇ ಭಾರತ ಸ್ಕಾಚ್ ವಿಸ್ಕಿ ಆಮದು ಮಾಡಿಕೊಳ್ಳುವ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿದೆ. ಸ್ಕಾಚ್ ವಿಸ್ಕಿಯ ಪ್ರಮುಖ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ. ಸ್ಕಾಚ್ ವಿಸ್ಕಿ ಸಂಸ್ಥೆ ವತಿಯಿಂದ ವಿವಿಧ ದೇಶಗಳಲ್ಲಿ ಮಾರಾಟವಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಫ್ರಾನ್ಸ್ 9 ಕೋಟಿ ಬಾಟಲ್ ಆಮದು ಮಾಡಿಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದೆ.
ಅಮೆರಿಕ 5.3 ಕೋಟಿ ಬಾಟಲ್ ಆಮದು ಮಾಡಿಕೊಂಡು 2 ನೇ ಸ್ಥಾನದಲ್ಲಿದ್ದರೆ, 3 ನೇ ಪ್ರಮುಖ ಆಮದು ರಾಷ್ಟ್ರವಾಗಿರುವ ಭಾರತ 4.1 ಕೋಟಿ ಬಾಟಲ್ ಆಮದು ಮಾಡಿಕೊಂಡಿದೆ.