6 ವರ್ಷದ ಬಾಲಕನ ಹೊಟ್ಟೆಯಿಂದ ಅವಳಿ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದ ಅಪರೂಪದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಜಾರ್ಖಂಡ್ ನಿವಾಸಿ ವೀರೇಂದ್ರ ಕುಮಾರ್ ಮತ್ತು ಲಾಲತಿದೇವಿ ಅವರ ಮಗ ರಿತೇಶ್ ಕುಮಾರ್ ಹೊಟ್ಟೆಯಲ್ಲಿ ಜೀವಂತ ಅವಳಿ ಭ್ರೂಣವನ್ನು ನೋಡಿದ ವೈದ್ಯರು ದಂಗಾಗಿದ್ದಾರೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಿತೇಶ್ ನನ್ನು ಸಿಟಿ ಸ್ಕ್ಯಾನ್ ಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಅವಳಿ ಭ್ರೂಣವಿರುವುದು ತಿಳಿದುಬಂತು. ಭ್ರೂಣಕ್ಕೆ ಆಗಲೇ ಅಂಗಾಗಗಳು ವೃದ್ಧಿಯಾಗಿದ್ದವು. ಹುಟ್ಟಿನಿಂದಲೇ ರಿತೇಶ್ ಹೊಟ್ಟೆಯಲ್ಲಿ ಭ್ರೂಣವಿತ್ತೆಂದು ವೈದ್ಯರು ಹೇಳಿದ್ದಾರೆ. ರಿತೇಶ್ ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಭ್ರೂಣವನ್ನು ಹೊರತೆಗೆಯದಿದ್ದಲ್ಲಿ ಕ್ಯಾನ್ಸರ್ ಉಂಟಾಗುವ ಸಂಭವವಿತ್ತು ಎಂದು ವೈದ್ಯರು ಹೇಳಿದ್ದಾರೆ.