ಸಿರಿಯಾದ ಬಂಡುಕೋರರು ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಾಂಬ್ ಸ್ಫೋಟಿಸಿದೆ. ಈ ಅವಘಡದ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ.
ಆದ್ರೆ ಬಾಂಬ್ ಸ್ಫೋಟದಲ್ಲಿ ಸಾವು- ನೋವು ಸಂಭವಿಸಿರುವ ಬಗ್ಗೆ ಮಾಹಿತಿಯಿಲ್ಲ. 30 ಸೆಕೆಂಡ್ ಗಳ ವಿಡಿಯೋ ಇದು, ಸಿರಿಯಾದ ಬಂಡುಕೋರರೆಲ್ಲ ಕ್ಯಾಮೆರಾ ಮುಂದೆ ಕುಳಿತಿದ್ರು. ಎರಡು ಬಂದೂಕಿನ ಸುತ್ತ ಕುಳಿತು ಮೈಕ್ರೋಫೋನ್ ನಲ್ಲಿ ಹಾಡುತ್ತ, ಮಾತನಾಡುತ್ತ ಎಂಜಾಯ್ ಮಾಡುತ್ತಿದ್ರು. ಅವರಲ್ಲೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಬಟನ್ ಪ್ರೆಸ್ ಮಾಡ್ತಿದ್ದಂತೆ ಕೋಣೆಯಲ್ಲಿ ಬಾಂಬ್ ಸ್ಫೋಟಿಸಿದೆ. ಅಲ್ಲೆಲ್ಲಾ ಹೊಗೆ ತುಂಬಿಕೊಂಡಿದೆ.
ಆಗ ಫೋಟೋ ತೆಗೆಯುತ್ತಿದ್ದಾತ ಅಲ್ಲಾಹು ಅಕ್ಬರ್ ಎಂದು ಕೂಗಲಾರಂಭಿಸಿದ್ದ. ಹೇಗೋ ಚೇತರಿಸಿಕೊಂಡ ಬಂಡುಕೋರರು ಪರಸ್ಪರ ಸಹಾಯ ಮಾಡುತ್ತ ಮೇಲಕ್ಕೇಳ್ತಾರೆ. ಇದು ಕಡಿಮೆ ತೀವ್ರತೆಯ ಬಾಂಬ್ ಸ್ಫೋಟದಂತೆ ಭಾಸವಾಗುತ್ತಿದೆ.