ಉಚಿತ ಫೋನ್ ಕಾಲ್ ಸೇವೆ ನೀಡುವುದಾಗಿ ಹೇಳುವ ಮೂಲಕ, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಕುರಿತಾದ ಸುದ್ದಿಯೊಂದು ಇಲ್ಲಿದೆ.
ಉಚಿತ ಸೇವೆ ನೀಡುವ ರಿಲಯನ್ಸ್ ಜಿಯೋ ಕುರಿತಾದ ನಿಜವಾದ ಬಣ್ಣ ಇಲ್ಲಿದೆ ನೋಡಿ. ಸಾಮಾನ್ಯವಾಗಿ ಸದ್ಯ ಬಳಕೆಯಲ್ಲಿರುವ ಏರ್ ಟೆಲ್, ಬಿ.ಎಸ್.ಎನ್.ಎಲ್. ಮೊದಲಾದ ಟೆಲಿಕಾಂ ಕಂಪನಿಗಳು 2 ಜಿ ಮತ್ತು 3 ಜಿ ಹಾಗೂ 4 ಜಿ ನೆಟ್ ವರ್ಕ್ ನಲ್ಲಿ ವಾಯ್ಸ್ ಕಾಲ್ ಸೇವೆ ಹಾಗೂ ಇಂಟರ್ ನೆಟ್ ಸೇವೆಯನ್ನು ನೀಡುತ್ತಿವೆ. ಮೊಬೈಲ್ ಇಂಟರ್ ನೆಟ್ ಆಫ್ ಮಾಡಿದಾಗ, ಡಾಟಾ ಕೂಡ ಆಫ್ ಆಗುತ್ತದೆ.
ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ VoLTE ಟೆಕ್ನಾಲಜಿಯನ್ನು ಜಿಯೋ ಹೊಂದಿದೆ. ಈ ತಂತ್ರಜ್ಞಾನದ ಮೂಲಕ ಧ್ವನಿ ಕರೆಗಳನ್ನು ಡಾಟಾ ಪ್ಯಾಕ್ ಮೂಲಕ ರವಾನೆ ಮಾಡಲಾಗುತ್ತದೆ.
ಮೊಬೈಲ್ ಇಂಟರ್ ನೆಟ್ ಆಫ್ ಮಾಡಿದಾಗಲೂ ಡಾಟಾ ಪ್ಯಾಕ್ ಮೂಲಕ ಕರೆ ಮಾಡಲು ಸಾಧ್ಯವಿದ್ದು, ಇದಕ್ಕೆ ಡಾಟಾ ಕರೆಗಳು ಅನ್ವಯವಾಗುತ್ತವೆ ಎಂದು ಹೇಳಲಾಗಿದೆ.
ಔಟ್ ಗೋಯಿಂಗ್ ಕರೆಗಳಿಗೆ ಸಾಮಾನ್ಯವಾಗಿ ದರ ಅನ್ವಯಿಸುತ್ತವೆ. ಆದರೆ ಜಿಯೋ ನೆಟ್ ವರ್ಕ್ ನಲ್ಲಿ ಔಟ್ ಗೋಯಿಂಗ್ ಮತ್ತು ಇನ್ ಕಮಿಂಗ್ ಕಾಲ್ ಗಳಿಗೆ ಡಾಟಾ ದರ ಅನ್ವಯವಾಗುತ್ತದೆ. ಫೋನ್ ನಲ್ಲಿ ಕರೆ ಮಾಡಲಿ, ಸ್ವೀಕರಿಸಲಿ ಡಾಟಾ ಖರ್ಚಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ ಬ್ರೌಸಿಂಗ್ ಡಾಟಾ ಸೇರಿದಲ್ಲಿ ರಿಲಯನ್ಸ್ ಜಿಯೋ ಕೂಡ ಹೆಚ್ಚು ಕಡಿಮೆ ಬೇರೆ ಕಂಪನಿಗಳ ರೀತಿಯಲ್ಲೇ ಇದೆ. ಇದೆಲ್ಲಾ ಸಂಪೂರ್ಣ ತಿಳಿಯಲು ಸ್ವಲ್ಪ ಸಮಯ ಬೇಕಾಗಬಹುದೆಂದು ಹೇಳಲಾಗಿದೆ.