ತಾಂಜಾನಿಯಾದಲ್ಲಿ ಪತ್ತೆಯಾದ ಅವಶೇಷ 2014 ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ MH 370 ವಿಮಾನದ್ದು ಅಂತಾ ಮಲೇಷಿಯಾ ಖಚಿತಪಡಿಸಿದೆ.
ಕಳೆದ ಜೂನ್ ನಲ್ಲಿ ತಾಂಜಾನಿಯಾದ ಪೆಂಬಾ ಐಸ್ ಲ್ಯಾಂಡ್ ನಲ್ಲಿ ವಿಮಾನದ ಅವಶೇಷ ದೊರೆತಿತ್ತು. ಅಲ್ಲಿ ಸಿಕ್ಕ ರೆಕ್ಕೆ ಎಂಎಚ್ 370 ವಿಮಾನದ್ದೇ ಅನ್ನೋದನ್ನು ತಜ್ಞರ ತಂಡ ದೃಢಪಡಿಸಿದೆ.
2014 ರ ಮಾರ್ಚ್ ನಲ್ಲಿ ಮಲೇಷಿಯಾದ ಕೌಲಾಲಂಪುರದಿಂದ ಚೀನಾದ ಬೀಜಿಂಗ್ ಗೆ ಹೊರಟಿದ್ದ ಬೋಯಿಂಗ್ 777 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. ಆ ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 239 ಮಂದಿ ಪ್ರಯಾಣಿಸುತ್ತಿದ್ದರು. 2 ವರ್ಷಗಳ ಸತತ ಹುಡುಕಾಟದ ಬಳಿಕ ವಿಮಾನದ ಬಗ್ಗೆ ಸುಳಿವು ಸಿಕ್ಕಿದ್ದು, ಅದು ಅಪಘಾತಕ್ಕೀಡಾಗಿರುವುದು ದೃಢಪಟ್ಟಿದೆ. 2015ರ ಜುಲೈನಲ್ಲಿ ವಿಮಾನದ ರೆಕ್ಕೆಯೊಂದು ಫ್ರಾನ್ಸ್ ನ ಐಲ್ಯಾಂಡ್ ನಲ್ಲಿ ಪತ್ತೆಯಾಗಿತ್ತು.