ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಗೆ, ಕಾಮುಕನೊಬ್ಬ ದಿನಾಲು ರೇಗಿಸುತ್ತಿದ್ದ. ಅಲ್ಲದೇ ಅದೇ ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನೂ ಚುಡಾಯಿತ್ತಿದ್ದ. ಈತನ ಕಾಟಕ್ಕೆ ರೋಸಿಹೋದ ಯುವತಿ ರಸ್ತೆಯಲ್ಲೇ ಚಪ್ಪಲಿಯಿಂದ ಬಾರಿಸಿದ್ದಾಳೆ. ದಿಟ್ಟ ಯುವತಿಗೆ ಅಲ್ಲಿದ್ದ ಜನ ಕೂಡ ಸಾಥ್ ನೀಡಿದ್ದು, ಕಾಮುಕನಿಗೆ ರಸ್ತೆಯಲ್ಲೇ ಪಾಠ ಕಲಿಸಲಾಗಿದೆ.
ಯುವತಿ ಕಾಮುಕನಿಗೆ ರಸ್ತೆಯಲ್ಲಿ ಚಪ್ಪಲಿಯಿಂದ ಬಾರಿಸುತ್ತಿರುವ ಈ ದೃಶ್ಯವನ್ನು ಅಲ್ಲಿದ್ದವರೊಬ್ಬರು, ಸೆರೆ ಹಿಡಿದು ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ.