ಚೆನ್ನೈನ ಅರುಮಬಕ್ಕಮ್ ನಲ್ಲಿರುವ ಒಂದು ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿ ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ವೇಳೆ ಆಕೆಯ ದುಪ್ಪಟ್ಟಾ ಗ್ರೈಂಡರ್ ಗೆ ಸಿಲುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವತಿ ಹಂಪ್ಸಿಬಾ ತನ್ನ ತಾಯಿಯೊಂದಿಗೆ ಈ ಕ್ಯಾಂಟೀನ್ ನಲ್ಲಿ ಕಳೆದ 3 ತಿಂಗಳಿಂದ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಮಂಗಳವಾರ ಸಂಜೆ 4.30 ರ ಸುಮಾರಿಗೆ ಅಕ್ಕಿ ರುಬ್ಬುತ್ತಿದ್ದ ವೇಳೆ ಹಂಪ್ಸಿಬಾಳ ದುಪ್ಪಟ್ಟಾ ಗ್ರೈಂಡರ್ ಗೆ ಸಿಲುಕಿತು. ಗ್ರೈಂಡರ್ ಚಾಲನೆಯಲ್ಲಿದ್ದರಿಂದ ದುಪ್ಪಟ್ಟಾ ಹಂಪ್ಸಿಬಾಳ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.