ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಎಷ್ಟೆಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಎಷ್ಟೇ ಎಚ್ಚರಿಕೆ ವಹಿಸಿದರೂ, ಕಡಿಮೆಯೇ, ಕೆಲವೊಮ್ಮೆ ಯಡವಟ್ಟುಗಳಾಗಿಬಿಡುತ್ತವೆ. ಹೀಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಏನಾಗಿದೆ ನೋಡಿ.
ವಿಮಾನ ಇಳಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ರನ್ ವೇಯಿಂದ ಕೆಳಗೆ ಜಾರಿದ ಘಟನೆ ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದೆಹಲಿಯಿಂದ ಬಂದ ಜೆಟ್ ಏರ್ ವೇಸ್ ನ ಪೈಲಟ್ ನಿಲ್ದಾಣದಲ್ಲಿ ಇಳಿಸಿದ್ದು, ಈ ಸಂದರ್ಭದಲ್ಲಿ ರನ್ ವೇ ಬಿಟ್ಟು ಜಾರಿದೆ ಎನ್ನಲಾಗಿದೆ. ನಿಲ್ದಾಣದಲ್ಲಿನ ತಾಂತ್ರಿಕ ಸಿಬ್ಬಂದಿಯ ಸೂಚನೆ ಪಡೆದುಕೊಂಡ ಪೈಲಟ್ ನಿಗದಿತ ಸ್ಥಳದಲ್ಲಿ ವಿಮಾನ ಇಳಿಸಿದ್ದಾರೆ. ಸ್ಲೋ ಇದ್ದ ವಿಮಾನ ನಿಲುಗಡೆ ಆಗುವ ಬದಲಿಗೆ ಜಾರಿದೆ ಎಂದು ಹೇಳಲಾಗಿದೆ.
ರನ್ ವೇಯಿಂದ ಜೆಟ್ ಏರ್ ವೇಸ್ ವಿಮಾನ ಜಾರಿದ್ದು, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ. ಕೂಡಲೇ ಅವರನ್ನೆಲ್ಲಾ ಇಳಿಸಲಾಗಿದೆ. ಅಲ್ಲದೇ, ನಿಲ್ದಾಣದ ಅಧಿಕಾರಿಗಳು ಮತ್ತು ಜೆಟ್ ಏರ್ ವೇಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಕಸ್ಮಿಕವಾಗಿ ವಿಮಾನ, ರನ್ ವೇ ಬಿಟ್ಟು ಜಾರಿದೆ ಎನ್ನಲಾಗಿದೆ.