ವಿಶ್ವದ ಪ್ರಮುಖ ಕೆಮಿಕಲ್ ಮತ್ತು ಹೆಲ್ತ್ ಕೇರ್ ಸಮೂಹ ಸಂಸ್ಥೆಯಾಗಿರುವ ಬಾಯರ್ ಅತಿ ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದ್ದು, ಇದು ವಿಶ್ವದ ಗಮನ ಸೆಳೆದಿದೆ.
ಬಾಯರ್ ಬರೋಬ್ಬರಿ 66 ಬಿಲಿಯನ್ ಡಾಲರ್ ಮೊತ್ತ ನೀಡಿ, ಮಾನ್ಸಾಂಟೊ ಕಂಪನಿಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು, ಕಳೆದ 4 ತಿಂಗಳಿಂದ ನಡೆಯುತ್ತಿದ್ದ ಈ ಕುರಿತ ಪ್ರಕ್ರಿಯೆಗೆ ಅಂತಿಮ ತೆರೆ ಬಿದ್ದಿದೆ. ಈ ಬೃಹತ್ ಖರೀದಿ ಒಪ್ಪಂದ ಷೇರುಪೇಟೆಯ ಮೇಲೆಯೂ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ. ಮಾನ್ಸಾಂಟೊ ಕಂಪನಿಯ ಪ್ರತಿ ಷೇರಿಗೆ 127.50 ಡಾಲರ್ ಮೊತ್ತ ನೀಡಲು ಬಾಯರ್ ಒಪ್ಪಿದೆ.
ಇದು ಈ ವರ್ಷ ಷೇರಿಗೆ ದೊರೆತ ಅತಿ ಹೆಚ್ಚಿನ ಮೊತ್ತ ಎಂದು ಹೇಳಲಾಗಿದೆ. ಮಾನ್ಸಾಂಟೊ ಹಾಗೂ ಬಾಯರ್ ಕಂಪನಿ ನಡುವೆ ನಡೆದ ಈ ಡೀಲ್ ಕೃಷಿ ಹಾಗೂ ಕೆಮಿಕಲ್ ಕ್ಷೇತ್ರದಲ್ಲಿ ನಡೆದ ಪ್ರಮುಖ ಬೆಳವಣಿಗೆಯಾಗಿದೆ.