ಬೇಲಿ ಹಾರಲು ಹೋಗಿ ಸ್ಪೇನ್ ಗಡಿಯಲ್ಲಿ 200ಕ್ಕೂ ಹೆಚ್ಚು ವಲಸಿಗರು ಪೇಚಿಗೆ ಸಿಲುಕಿದ್ದರು. ಅವರಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಸಬ್ ಸಹರನ್ ಆಫ್ರಿಕಾದಿಂದ ಬಂದ 200ಕ್ಕೂ ಹೆಚ್ಚು ವಲಸಿಗರು ಮೊರಾಕ್ಕೋ ಮತ್ತು ಉತ್ತರ ಆಫ್ರಿಕಾದ ಸ್ವಾಯತ್ತ ನಗರವನ್ನು ಬೇರ್ಪಡಿಸುವ ಗಡಿಯಲ್ಲಿ ಜಮಾಯಿಸಿದ್ದರು.
ಒಳ ಪ್ರವೇಶಿಸುವ ಹುಮ್ಮಸ್ಸಿನಲ್ಲಿ ಎಲ್ರೂ 6 ಮೀಟರ್ ಎತ್ತರದ ಬೇಲಿ ಏರಿದ್ದಾರೆ. ಅಲ್ಲಿಂದ ಕೆಳಕ್ಕೆ ಹಾರಲು ಸಾಧ್ಯವಾಗಿಲ್ಲ. ಗಡಿಯಲ್ಲಿದ್ದ ಸಿಬ್ಬಂದಿ ಬಂದು ಅವರನ್ನು ಕೆಳಕ್ಕಿಳಿಸಬೇಕಾಯ್ತು.
ವಲಸಿಗರು ಗಂಟೆಗಟ್ಟಲೆ ಬಿಸಿಲ ಝಳದಲ್ಲೇ ಬೇಲಿ ಮೇಲೇರಿ ಕುಳಿತು ಸುಸ್ತಾದ್ರು. ಸುಮಾರು 9 ಗಂಟೆಗಳ ಕಾಲ ಬೇಲಿ ಮೇಲೆ ಪರದಾಟ ನಡೆಸಿ ಗಾಯಗೊಂಡ 50ಕ್ಕೂ ಹೆಚ್ಚು ವಲಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 4ರ ನಂತರ ಸ್ಯೂಟಾದಲ್ಲಿ ಇದೇ ಮೊದಲ ಬಾರಿಗೆ 200ಕ್ಕೂ ಹೆಚ್ಚು ವಲಸಿಗರು ಒಮ್ಮೆಲೇ ಗಡಿ ಬೇಧಿಸಲು ಪ್ರಯತ್ನಿಸಿದ್ದಾರೆ.