ಚೆನ್ನೈ: ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ, ಸಂಘರ್ಷ ಶುರುವಾಗಿರುವ ಬೆನ್ನಲ್ಲೇ ಕನ್ನಡಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಘಟನೆ ವರದಿಯಾಗಿದೆ.
ಚೆನ್ನೈನಲ್ಲಿ ಕನ್ನಡಿಗರ ಒಡೆತನದಲ್ಲಿರುವ ವುಡ್ ಲ್ಯಾಂಡ್ ಹೋಟೆಲ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದಾಳಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಏಕಾಏಕಿ ಹೋಟೆಲ್ ಒಳಗೆ ನುಗ್ಗಿದ್ದು, ರಿಸೆಪ್ಷನ್ ಬಳಿ ದಾಂಧಲೆ ಮಾಡಿ ಹೋಟೆಲ್ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಅಲ್ಲದೇ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದಾಗಿ ಹೋಟೆಲ್ ನಲ್ಲಿ ಬೆಂಕಿ ತಗುಲಿ ಹೆಚ್ಚಿನ ಹಾನಿ ಸಂಭವಿಸಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಕರ್ನಾಟಕದ ನೋಂದಣಿಯ ವಾಹನಗಳ ಮೇಲೆ ಕೆಲವು ಕಡೆಗಳಲ್ಲಿ ದಾಳಿ ನಡೆಸಿದ ವರದಿಯಾಗಿದೆ.