35 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ್ದ ಆರೋಪಿ ಜಾನ್ ಹಿಂಕ್ಲೇ ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.
35 ವರ್ಷಗಳ ನಂತರ ಸೇಂಟ್ ಎಲಿಜಬೆತ್ ಆಸ್ಪತ್ರೆಯಿಂದ ಜಾನ್ ಹಿಂಕ್ಲೇ ರಿಲೀಸ್ ಆಗಿದ್ದಾನೆ. ಹಿಂಕ್ಲೇಗೆ ಈಗ 61 ವರ್ಷ, ಇನ್ಮೇಲೆ ಆತನಿಂದ ಯಾರಿಗೂ ಅಪಾಯವಿಲ್ಲ, ಆತ ತನ್ನ 90 ವರ್ಷದ ವೃದ್ಧ ತಾಯಿಯ ಜೊತೆಗೆ ವಿಲಿಯಮ್ಸ್ ಬರ್ಗ್ ನಲ್ಲಿ ವಾಸಿಸಬಹುದು ಅಂತಾ ಜುಲೈನಲ್ಲಿ ಫೆಡರಲ್ ಜಡ್ಜ್ ತೀರ್ಪು ನೀಡಿದ್ದರು.
1990 ರಿಂದೀಚೆಗೆ ಆಗಾಗ ತಾಯಿಯನ್ನು ಭೇಟಿ ಮಾಡಲು ಹಿಂಕ್ಲೇಗೆ ಅವಕಾಶ ಕಲ್ಪಿಸಲಾಗಿತ್ತು. 1981ರ ಮಾರ್ಚ್ 31ರಂದು ವಾಷಿಂಗ್ಟನ್ ಹೋಟೆಲ್ ಒಂದರ ಬಳಿ ಶೂಟೌಟ್ ನಡೆದಿತ್ತು. ನಟಿ ಜೋಡಿ ಫಾಸ್ಟರ್ ಅವರನ್ನು ಮೆಚ್ಚಿಸಲು ಹೆಂಕ್ಲೀ, ಅಧ್ಯಕ್ಷ ರೊನಾಲ್ಡ್ ರೇಗನ್ ರತ್ತ ಗುಂಡು ಹಾರಿಸಿದ್ದ. ಆತನಿಗೆ ಬುದ್ಧಿಭ್ರಮಣೆ ಆಗಿದ್ದರಿಂದ ಆರೋಪ ಸಾಬೀತಾಗಿರಲಿಲ್ಲ. ಆದ್ರೆ ರೇಗನ್ ಫೌಂಡೇಶನ್ ಹೆಂಕ್ಲಿ ಬಿಡುಗಡೆಯನ್ನು ವಿರೋಧಿಸುತ್ತಲೇ ಬಂದಿತ್ತು.