ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಇಂದು ಕೆ.ಆರ್.ಎಸ್. ಡ್ಯಾಂ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು ಹೆಲಿಪ್ಯಾಡ್ ಗೆ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕಿಸೆಗಳ್ಳನ ಕೈಚಳಕಕ್ಕೆ ಒಳಗಾಗಿದ್ದಾರೆ.
ಹೆಲಿಪ್ಯಾಡ್ ಬಳಿ ಭಾರೀ ಜನಸ್ತೋಮ ಸೇರಿದ್ದು, ಇದೇ ಸಂದರ್ಭ ಸಾಧಿಸಿದ ಕಿಸೆಗಳ್ಳನೊಬ್ಬ ಚಿನಕುರಳಿ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಅವರ ಕಿಸೆಗೆ ಕತ್ತರಿ ಹಾಕಿ 20 ಸಾವಿರ ರೂ. ಲಪಟಾಯಿಸಿದ್ದಾನೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಕಳೆದ ಸೋಮವಾರದಿಂದಲೂ ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಇಂದು ಹೆಚ್.ಡಿ. ದೇವೇಗೌಡರು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ.