ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಎಪಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆಪ್ ನ ಮತ್ತೊಬ್ಬ ಶಾಸಕ ಅಮಾನತ್ ಉಲ್ಲಾ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.
ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಅಮಾನತ್ ಉಲ್ಲಾ ಅವರ ನಾದಿನಿ ದೆಹಲಿಯ ಜಾಮಿಯಾ ನಗರ್ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿದ್ದಾರೆ.
ಅಷ್ಟೇ ಅಲ್ಲ ತನ್ನ ಪತಿ ಕೂಡ ವರದಕ್ಷಿಣೆ ತರುವಂತೆ ಒತ್ತಡ ಹೇರುತ್ತಿದ್ದಾನೆ, ಅಮಾನತ್ ಉಲ್ಲಾ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಾನೆ ಅಂತಾ ದೂರಿದ್ದಾರೆ. ಅಮಾನತ್ ಉಲ್ಲಾ ಖಾನ್ ಮತ್ತು ಆಕೆಯ ಪತಿಯ ಮೇಲೆ ಪ್ರಕರಣ ದಾಖಲಾಗಿದೆ. ವಕ್ಫ್ ಮಂಡಳಿಯ ಭ್ರಷ್ಟಾಚಾರ ಬಯಲಿಗೆಳೆಯಲು ಮುಂದಾಗಿದ್ದಕ್ಕೆ ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಅಂತಾ ಅಮಾನತ್ ಉಲ್ಲಾ ಆರೋಪ ಮಾಡಿದ್ದಾರೆ.
ವಕ್ಫ್ ಮಂಡಳಿಯ ಭೂಮಿಯಲ್ಲಿ ಶಾಲೆ ಮತ್ತು ಆಸ್ಪತ್ರೆ ನಿರ್ಮಿಸಲು ನಾನು ಮುಂದಾಗಿದ್ದೆ. ಆದ್ರೆ ಅಲ್ಲಿ ಹೋಟೆಲ್ ತಲೆಯೆತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಷಡ್ಯಂತ್ರ ರಚಿಸಲಾಗಿದೆ ಅಂತಾ ಹೇಳಿದ್ದಾರೆ. ಶಾಸಕ ಸ್ಥಾನವನ್ನು ತ್ಯಜಿಸುವುದಾಗಿ ಅಮಾನತ್ ಉಲ್ಲಾ ಖಾನ್ ತಿಳಿಸಿದ್ದಾರೆ.