ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಅಗ್ಗದ ಆಫರ್ ಗಳು ಉಳಿದ ಕಂಪನಿಗಳ ನಿದ್ದೆಗೆಡಿಸಿದೆ. ಹಾಗಾಗಿ ಉಳಿದ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಹೊಸ ಹೊಸ ಆಫರ್ ಗಳನ್ನು ನೀಡ್ತಾ ಇವೆ. ಇದರಲ್ಲಿ ಬಿಎಸ್ಎನ್ಎಲ್ ಕೂಡ ಹಿಂದೆ ಬಿದ್ದಿಲ್ಲ.
ಬಿಎಸ್ಎನ್ಎಲ್ ಗ್ರಾಹಕರಿಗಾಗಿ ನೂತನ ಆಫರ್ ಹೊತ್ತು ತಂದಿದೆ. ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಹೊಸ ಡಾಟಾ ಪ್ಲಾನ್ ಜಾರಿಗೆ ತರಲು ನಿರ್ಧರಿಸಿದೆ. ಕೇವಲ 9 ರೂಪಾಯಿಗೆ ತಿಂಗಳ ಪೂರ್ತಿ ಅನಿಯಮಿತ ಬ್ರಾಡ್ ಬ್ಯಾಂಡ್ ಸೇವೆ ನೀಡಲು ಮುಂದಾಗಿದೆ. ಒಂದು ಜಿಬಿ ಖಾಲಿಯಾಗುವವರೆಗೆ ವೇಗ 2ಎಂಬಿಪಿಎಸ್ ಇರಲಿದೆ. ನಂತ್ರ ವೇಗ 1 ಎಂಬಿಪಿಎಸ್ ಗೆ ಇಳಿಯಲಿದೆ.