ರಾಮನಗರ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ, ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಭೆಂಡರಕಟ್ಟೆಯಲ್ಲಿ ನಡೆದಿದೆ.
ಅರಣ್ಯ ಇಲಾಖೆ ಕಾವಲುಗಾರ 38 ವರ್ಷದ ಪಂಚಲಿಂಗಯ್ಯ ಮೃತಪಟ್ಟವರು. ಪಂಚಲಿಂಗಯ್ಯ ಕಾಡಿನಿಂದ ಬಂದಿದ್ದ ಆನೆಯನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಪಂಚಲಿಂಗಯ್ಯ ಅವರು, ಭೆಂಡರಕಟ್ಟೆಯ ಸಮೀಪ ಕಾಣಿಸಿಕೊಂಡು, ಆತಂಕ ಮೂಡಿಸಿದ್ದ ಕಾಡಾನೆಯನ್ನು ವಾಪಸ್ ಕಾಡಿಗೆ ಕಳಿಸುತ್ತಿದ್ದರು. ಈ ಸಂದರ್ಭದಲ್ಲಿ ಪಂಚಲಿಂಗಯ್ಯ ಅವರ ಮೇಲೆ ಆನೆ ದಾಳಿ ಮಾಡಿದೆ ಎನ್ನಲಾಗಿದೆ.
ಆನೆ ದಾಳಿಯಿಂದಾಗಿ ಪಂಚಲಿಂಗಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.