ಛತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರ ಮತ್ತವನ ಸ್ನೇಹಿತರು ವಿನಾಕಾರಣ ವಾಹನ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಮಂತುರಾಮ್ ಪವಾರ್ ಎಂಬಾತನ ಪುತ್ರ, ನನ್ನು ಪವಾರ್ ಮತ್ತವನ ಸ್ನೇಹಿತರು ಮಹಿಂದ್ರಾ ಎಸ್ ಯು ವಿ ಕಾರಿನಲ್ಲಿ ಬರ್ತಾ ಇದ್ರು. ಬೈಕ್ ನಲ್ಲಿ ಹೋಗ್ತಾ ಇದ್ದ ಇಬ್ಬರು ಸವಾರರನ್ನು ಓವರ್ ಟೇಕ್ ಮಾಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅವರಿಗೆ ಥಳಿಸಿದ್ದಾರೆ.
ಬೈಕ್ ಅಡ್ಡಗಟ್ಟಿ ಇಬ್ಬರನ್ನೂ ರಸ್ತೆ ಬದಿಗೆ ಎಳೆದು ತಂದು ಕೋಲಿನಿಂದ ಥಳಿಸಿದ್ದಾರೆ. ಕಾಲಿಂದ ಒದ್ದು ಹಿಂಸಿಸಿದ್ದಾರೆ. ಕೊನೆಗೆ ರಸ್ತೆಯಲ್ಲಿ ಸಂಚರಿಸ್ತಾ ಇದ್ದ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಹಲ್ಲೆ ಮಾಡದಂತೆ, ನನ್ನು ಸ್ನೇಹಿತರ ಬಳಿ ಮನವಿ ಮಾಡಿಕೊಂಡ್ರು.
ಬಿಜೆಪಿ ಮುಖಂಡನ ಪುತ್ರ ನಡೆಸಿದ ಈ ರೌಡಿಸಂ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ರಾಯ್ಪುರದಿಂದ ಕೇವಲ ಒಂದು ಕಿಮೀ ದೂರದಲ್ಲಿ ಈ ಕೃತ್ಯ ನಡೆದಿದೆ. ಆಗಸ್ಟ್ 15 ರಂದೇ ಈ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದ್ದು, ಇದುವರೆಗೂ, ನನ್ನು ಮತ್ತವನ ಸ್ನೇಹಿತರ ವಿರುದ್ಧ ಪ್ರಕರಣ ಕೂಡ ದಾಖಲಾಗಿಲ್ಲ.