ಭೂತ, ಪ್ರೇತ, ಪಿಶಾಚಿ ಅಂತ ಹೇಳೋದನ್ನು ಕೇಳಿದ್ದೇವೆ. ಅವುಗಳನ್ನು ನೋಡಿದವರು ಕಡಿಮೆ. ಚೀನಾದ ಬೀಜಿಂಗ್ ನಲ್ಲಿ ಭೂತ ಚೇಷ್ಟೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅದು ಮಧ್ಯರಾತ್ರಿ ಸಮಯ, ಎಲ್ಲೆಡೆ ನೀರವ ಮೌನ, ಕಾರ್ಗತ್ತಲ ಆರ್ಭಟ. ನೀವು ನಂಬ್ತೀರೋ ಬಿಡ್ತೀರೋ, ಸ್ಟ್ಯಾಂಡ್ ಹಾಕಿ ನಿಲ್ಲಿಸಿಟ್ಟಿದ್ದ ಸೈಕಲ್ ನ ಪೆಡಲ್ ಇದ್ದಕ್ಕಿದ್ದಂತೆ ತಾನಾಗೇ ತಿರುಗಲು ಶುರುವಾಗತ್ತೆ. ಸುಮಾರು ಒಂದು ನಿಮಿಷ ತಿರುಗಿದ ಸೈಕಲ್ ಪೆಡಲ್ ಒಮ್ಮೆ ತಟಸ್ಥವಾಗಿ ಮತ್ತೆ ಸ್ವಲ್ಪ ಹೊತ್ತು ಉಲ್ಟಾ ತಿರುಗುತ್ತೆ.
ಟೇಬಲ್ ಮೇಲೆ ಇಟ್ಟಿದ್ದ ಬಕೆಟ್ ಇದ್ದಕ್ಕಿದ್ದಂತೆ ಜಾರಿ ಕೆಳಕ್ಕೆ ಬೀಳುತ್ತೆ. ಆ ಪಾರ್ಕಿಂಗ್ ಏರಿಯಾದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಕೂಡ ಇಲ್ಲ. ಇದ್ದಿದ್ರೆ ಅವರೂ ಸಹ ಸಿಸಿ ಟಿವಿಯಲ್ಲಿ ಸೆರೆಯಾಗಬೇಕಿತ್ತು. ಭೂತ ಚೇಷ್ಟೆಯ ಈ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.