ಹರ್ಯಾಣದ ಮೇವತ್ ಜಿಲ್ಲೆಯಲ್ಲಿ ಗೋ ಮಾಂಸ ಬಳಕೆಯಾಗಿರುವ ಪ್ರಕರಣ ಬಯಲಾಗಿದೆ. ಬಿರಿಯಾನಿಯಲ್ಲಿ ಗೋಮಾಂಸ ಸೇರ್ಪಡೆಯಾಗುತ್ತಿರುವುದು ದೃಢಪಟ್ಟಿದೆ.
ಆಗಸ್ಟ್ 24ರಂದು ಬಿರಿಯಾನಿಯಲ್ಲಿ ಗೋಮಾಂಸ ಬೆರೆಸಿರುವ ಶಂಕೆ ಮೇರೆಗೆ ಸರ್ಕಾರ ಬಿರಿಯಾನಿಯನ್ನು ಪರೀಕ್ಷೆಗೆ ಕಳುಹಿಸುವಂತೆ ಸೂಚನೆ ನೀಡಿತ್ತು. ಸರ್ಕಾರದ ಆದೇಶದ ಮೇರೆಗೆ ಮಾರುಕಟ್ಟೆಯ 7 ಕಡೆ ದಾಳಿ ನಡೆಸಿದ್ದ ಪೊಲೀಸರು ಬಿರಿಯಾನಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಲಾಲಾ ಲಜಪತ ರಾಯ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಸಿದ ಪ್ರಯೋಗದಲ್ಲಿ ಗೋ ಮಾಂಸವಿರುವುದು ಸಾಬೀತಾಗಿದೆ. 7 ಸ್ಯಾಂಪಲ್ಸ್ ಪರೀಕ್ಷೆ ನಂತ್ರ ಬಿರಿಯಾನಿಯಲ್ಲಿ ಗೋಮಾಂಸವಿರುವುದು ಸಾಬೀತಾಗಿದೆ ಎಂದು ಡಾ. ರವೀಂದ್ರ ಶರ್ಮಾ ಹೇಳಿದ್ದಾರೆ. ಈಗಾಗಲೇ ವರದಿಯನ್ನು ಸರ್ಕಾರಕ್ಕೆ ರವಾನೆ ಮಾಡಲಾಗಿದೆ.