Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಬಹುಪಯೋಗಿ ನೇಲ್ ಪಾಲಿಶ್ ರಿಮೂವರ್

$
0
0
ಬಹುಪಯೋಗಿ ನೇಲ್ ಪಾಲಿಶ್ ರಿಮೂವರ್

ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ ಬಳಸಬಹುದು ಅಂತಾ ನಾವು ಹೇಳ್ತೇವೆ.

ಸಾಮಾನ್ಯವಾಗಿ ಲೆದರ್ ಶೂ ಗಳಿಗಾದ ಕಲೆ ಹೋಗುವುದಿಲ್ಲ. ಆಗ ನೇಲ್ ಪಾಲಿಶ್ ರಿಮೂವರ್ ನೆರವಿಗೆ ಬರುತ್ತೆ. ಇದರಿಂದ ಶೂ ಕ್ಲೀನ್ ಮಾಡಬಹುದು.

ಕೆಲವೊಮ್ಮೆ ಫೆವಿಕ್ವಿಕ್ ಕೈಗೆ ಅಂಟಿ ಬಿಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಹೋಗುವುದಿಲ್ಲ. ನೇಲ್ ಪಾಲಿಶ್ ರಿಮೂವರ್ ನಿಂದ ಇದನ್ನು ಸುಲಭವಾಗಿ ತೆಗೆಯಬಹುದು.

ಲೋಹದ ಸ್ಟಿಕ್ಕರ್ ತೆಗೆಯುವುದು ಸುಲಭವಲ್ಲ. ಒಂದು ವೇಳೆ ಸ್ಟಿಕ್ಕರ್ ಸುಲಭವಾಗಿ ಬಂದ್ರೂ ಅದರ ಕಲೆ ಹಾಗೆ ಉಳಿದುಬಿಡುತ್ತದೆ. ಆಗ ನೇಲ್ ಪಾಲಿಶ್ ರಿಮೂವರ್ ಬಳಸಿದ್ರೆ ಕಲೆ ಸುಲಭವಾಗಿ ಹೋಗುತ್ತದೆ.

ಬಟ್ಟೆಯ ಮೇಲೆ ಶಾಯಿ ಕಲೆಯಾದ್ರೆ ರಿಮೂವರ್ ಬಳಸಿ. ಕಲೆಯಾದ ಜಾಗಕ್ಕೆ ರಿಮೂವರ್ ಹಚ್ಚಿ ನಂತ್ರ ಸೋಪಿನಿಂದ ತೊಳೆಯಿರಿ.

ನೆಲದ ಮೇಲಿನ ಕಲೆಯನ್ನು ಕೂಡ ರಿಮೂವರ್ ಮೂಲಕ ಸುಲಭವಾಗಿ ಕ್ಲೀನ್ ಮಾಡಬಹುದು. ಕಲೆಯಾದ ಜಾಗಕ್ಕೆ ನೇಲ್ ಪಾಲಿಶ್ ರಿಮೂವರ್ ಹಾಕಿ ತಿಕ್ಕಿದ್ರೆ ಕಲೆ ಮಾಯವಾಗುತ್ತದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>