ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಯೋಚನೆಯಲ್ಲಿ ನೀವಿದ್ರೆ ನಿಮಗೆ ಈ ಸುದ್ದಿ ಖುಷಿ ಕೊಡೋದ್ರಲ್ಲಿ ಎರಡು ಮಾತಿಲ್ಲ. ಜೈಪುರದಿಂದ ಸಿಂಗಾಪುರಕ್ಕೆ ಕೇವಲ 4,699 ರೂಪಾಯಿಯಲ್ಲಿ ಪ್ರಯಾಣ ಬೆಳೆಸುವ ಅವಕಾಶ ಸಿಗ್ತಾ ಇದೆ. ಆದ್ರೆ ಅದಕ್ಕಾಗಿ ಸ್ವಲ್ಪ ದಿನ ಕಾಯ್ಲೇಬೇಕು.
ಅಕ್ಟೋಬರ್ 2 ರಂದು ಜೈಪುರದಿಂದ ಸಿಂಗಾಪುರಕ್ಕೆ ವಿಮಾನ ಪ್ರಯಾಣ ಶುರುವಾಗಲಿದೆ. ಸಿಂಗಾಪುರ್ ಬೋಯಿಂಗ್ 787-8 ವಿಮಾನ, ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಒಂದು ಗಂಟೆ ನಂತ್ರ ಸಿಂಗಾಪುರಕ್ಕೆ ಹಾರಲಿದೆ. ಆರಂಭದಲ್ಲಿ ವಿಮಾನ ಯಾನದ ಬೆಲೆ ಕೇವಲ 4,699 ರೂಪಾಯಿ ಇರಲಿದೆ. ಬ್ಯಾಂಕಾಕ್, ಹಾಂಗ್ ಕಾಂಗ್ ಮತ್ತು ಸಿಡ್ನಿಗೆ ಕೂಡ ಕಡಿಮೆ ಬೆಲೆಯಲ್ಲಿಯೇ ಪ್ರಯಾಣ ಬೆಳೆಸಬಹುದಾಗಿದೆ.
ಸಿಂಗಾಪುರ್ ಏರ್ಲೈನ್ಸ್ ಪ್ರಾಂತೀಯ ಮುಖ್ಯಸ್ಥ ಮಹಾದೇವನ್ ಪ್ರಕಾರ, ಆರಂಭದಲ್ಲಿ ವಾರದಲ್ಲಿ ಮೂರು ದಿನ ವಿಮಾನ ಸಂಚರಿಸಲಿದೆ. ಸೋಮವಾರ, ಮಂಗಳವಾರ ಹಾಗೂ ಶನಿವಾರ ವಿಮಾನ ಹಾರಾಟ ನಡೆಸಲಿದೆ. ಶೀಘ್ರದಲ್ಲಿಯೇ ವಾರದಲ್ಲಿ ನಾಲ್ಕು ದಿನ ವಿಮಾನ ಹಾರಾಟ ಶುರುಮಾಡುವುದಾಗಿ ಅವರು ಹೇಳಿದ್ದಾರೆ.