ನ್ಯೂಜಿಲೆಂಡ್ ನಲ್ಲಿ ಭಾರತೀಯ ಮೂಲದ 6 ವರ್ಷದ ಪುಟ್ಟ ಬಾಲೆಯೊಬ್ಬಳು ದರೋಡೆಕೋರನನ್ನು ತಡೆದು ಸಾಹಸ ಮೆರೆದಿದ್ದಾಳೆ.
ಸಾರಾ ಪಟೇಲ್ ಎಂಬ 6 ವರ್ಷದ ಬಾಲಕಿಯ ತಂದೆಗೆ ಸೇರಿದ ಆಕ್ಲೆಂಡ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಕೊಡಲಿ ಹಿಡಿದು 6 ದರೋಡೆಕೋರರ ತಂಡ ನುಗ್ಗಿತ್ತು. ಅಲ್ಲಿದ್ದ ಕೆಲಸಗಾರರ ಮೇಲೆಲ್ಲ ಹಲ್ಲೆ ಮಾಡಿದ ದರೋಡೆಕೋರರು ಕೊಡಲಿ ಹಿಡಿದು ಎಲ್ಲರನ್ನೂ ಬೆದರಿಸ್ತಾ ಇದ್ರು.
ಸಾವಿವಾರು ಡಾಲರ್ ಬೆಲೆಬಾಳುವ ವಿದ್ಯುತ್ ಉಪಕರಣಗಳನ್ನು ದೋಚಿದ್ರು. ಇದನ್ನೆಲ್ಲ ನೋಡಿ ಸಾರಾ ಬೆದರಿ ಸುಮ್ಮನೆ ಕೂರಲಿಲ್ಲ. ಕೊಡಲಿ ಹಿಡಿದು ಅಬ್ಬರಿಸುತ್ತಿದ್ದ ದರೋಡೆಕೋರನನ್ನು ತಡೆಯಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲ ಕಾಲು ಹಿಡಿದು ಎಳೆದು ಅವನನ್ನು ಕೆಳಕ್ಕೆ ಬೀಳಿಸಿದ್ದಾಳೆ.
ಅಷ್ಟರಲ್ಲಿ ಸ್ಥಳಕ್ಕೆ ಬಂದ ನಾರ್ತ್ ಶೋರ್ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ರು. ಘಟನೆಯಲ್ಲಿ ಗಾಯಗೊಂಡಿದ್ದ ತನ್ನ ಅಜ್ಜನನ್ನು ಸಹ ಸಾರಾ ಸುರಕ್ಷಿತವಾಗಿ ಕರೆದೊಯ್ದಿದ್ದಾಳೆ. ಸಾರಾಳ ಈ ಸಾಹಸ ಅಂಗಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ದರೋಡೆಕೋರರನ್ನು ಎದುರಿಸಿದ ತಮ್ಮ ಮಗಳ ಸಾಹಸದ ಬಗ್ಗೆ ತಂದೆ ಸುಹೈಲ್ ಪಟೇಲ್ ಹೆಮ್ಮೆಪಟ್ಟಿದ್ದಾರೆ. ನ್ಯೂಜಿಲೆಂಡ್ ನ ದಿನಪತ್ರಿಕೆಗಳಲ್ಲೆಲ್ಲ ದರೋಡೆಕೋರರನ್ನೇ ಬಗ್ಗು ಬಡಿದ 6 ವರ್ಷದ ಪುಟ್ಟ ಪೋರಿ ಸಾರಾ ಪಟೇಲ್ ಬಗ್ಗೆ ಮೆಚ್ಚುಗೆಯ ಲೇಖನಗಳು ಪ್ರಕಟವಾಗಿವೆ.