ಟೊರಾಂಟೋ: ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಕಾಮನ್ ಆದರೂ, ಅದೆಲ್ಲಾ ಉಂಡು ಮಲಗುವ ತನಕ ಎಂಬ ಮಾತು ಪ್ರಚಲಿತದಲ್ಲಿದೆ. ದಂಪತಿ ನಡುವೆ ಉತ್ತಮ ಬಾಂಧವ್ಯಕ್ಕೆ ಸೆಕ್ಸ್ ಅವಶ್ಯಕ ಎಂದು ಹೇಳಲಾಗುತ್ತದೆ.
ಆದರೆ, ಸಮೀಕ್ಷೆಯೊಂದರಲ್ಲಿ ಇದಕ್ಕಿಂತ ಭಿನ್ನವಾದ ಮಾಹಿತಿಯೊಂದು ಕಂಡುಬಂದಿದೆ. ದಂಪತಿ ನಡುವೆ ಬಾಂಧವ್ಯ ಹೆಚ್ಚಲು ದಿನಾಲು ಸೆಕ್ಸ್ ಮಾಡಬೇಕೆಂದಿಲ್ಲ. ಬದಲಿಗೆ ವಾರಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸಿದರೂ, ಬಾಂಧವ್ಯ ಹೆಚ್ಚಾಗಿರುತ್ತದೆ. ಕೆನಡಾದ ಟೊರಾಂಟೊದಲ್ಲಿರುವ ವಿಶ್ವವಿದ್ಯಾಲಯದ ಸಂಶೋಧಕಿ ಆಮಿ ಮ್ಯೂಸೆ ಅವರು, 40 ವರ್ಷದ ಅಧ್ಯಯನದಲ್ಲಿ ಈ ಮಾಹಿತಿ ಕಂಡುಕೊಂಡಿದ್ದಾರೆ. ತಮ್ಮ ಸಂಶೋಧನೆಗಾಗಿ 30,000 ಅಮೆರಿಕ ದಂಪತಿಯನ್ನು ಸಂದರ್ಶಿಸಿ ಅಭಿಪ್ರಾಯ ಪಡೆದುಕೊಂಡಿದ್ದಾರೆ.
ಸಂಗಾತಿಯ ಮೇಲೆ ಸೆಕ್ಸ್ ಮಾಡಲು ಒತ್ತಡ ಹೇರಬಾರದು. ಒತ್ತಡದಿಂದ ಸೆಕ್ಸ್ ಮಾಡಿದಲ್ಲಿ ಆತ್ಮೀಯತೆ ಇರುವುದಿಲ್ಲ. ಬದಲಿಗೆ ವಾರಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ ದಂಪತಿಗಳ ನಡುವೆ ಸುಮಧುರ ಬಾಂಧವ್ಯ ಇರುತ್ತದೆ ಎಂದು ಹೇಳಲಾಗಿದೆ.