ಜೂನಿಯರ್ ಎನ್.ಟಿ.ಆರ್. ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಜನತಾ ಗ್ಯಾರೇಜ್’ ರಿಲೀಸ್ ದಿನವೇ ಸುಮಾರು 40 ಕೋಟಿ ರೂ ಗಳಿಸುವ ಮೂಲಕ ದಾಖಲೆ ಬರೆದಿದೆ.
ಸೌತ್ ಸಿನಿ ದುನಿಯಾದ ಗಮನ ಸೆಳೆದಿರುವ ‘ಜನತಾ ಗ್ಯಾರೇಜ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತೆಲುಗು, ಮಲಯಾಳಂನಲ್ಲಿ ರಿಲೀಸ್ ಆಗಿದ್ದು, ಇದೀಗ ಜಪಾನ್ ನಲ್ಲೂ ಸೌಂಡ್ ಮಾಡುತ್ತಿದೆ. ಜಪಾನ್ ನ ಹಲವು ಸೆಂಟರ್ ಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್., ಮೋಹನ್ ಲಾಲ್ ಮನೋಜ್ಞ ಅಭಿನಯ ನೀಡಿದ್ದಾರೆ.
ಕೊರಟಾಲ ಶಿವ ನಿರ್ದೇಶನ, ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದ್ದು, ಸಮಂತಾ, ನಿತ್ಯಾ ಮೆನನ್ ಮೊದಲಾದವರು ಅಭಿನಯಿಸಿದ್ದಾರೆ. ಮೇಕಿಂಗ್ ನಿಂದ ಚಿತ್ರ ಗಮನ ಸೆಳೆಯುವಂತಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.