ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ 5 ಕೋಟಿ ಮೌಲ್ಯದ ಬಂಗಲೆಯನ್ನು ಖರೀದಿಸಿದ್ದಾರೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ವಸತಿ ಯೋಜನೆ ಡಿಸ್ಕವರಿಯಲ್ಲಿ 7500 ಚದರ ಅಡಿಯ ವಿಲ್ಲಾ ಖರೀದಿಸಿದ್ದಾರೆ. ಖಂಡಾಲಾದಲ್ಲಿ ಸುನೀಲ್ ಡಿಸ್ಕವರಿ ಪ್ರಾಜೆಕ್ಟ್ ನಡೆಯುತ್ತಿದ್ದು, ಮನೆ ನಿರ್ಮಾಣ ಹಂತದಲ್ಲಿದೆ.
ಐದು ಬೆಡ್ ರೂಂ ಇರುವ ಈ ವಿಲ್ಲಾದಲ್ಲಿ ಲಾನ್ ಹಾಗೂ ಸ್ವಿಮ್ಮಿಂಗ್ ಪೂಲ್ ಕೂಡ ಇದೆ. ಈ ಬಂಗಲೆ ಒಟ್ಟು 10,000 ಚದರ ಅಡಿ ಪ್ರದೇಶವನ್ನು ಹೊಂದಿದೆ. ಮೊದಲು ಇದಕ್ಕೆ 8 ಕೋಟಿ ಎನ್ನಲಾಗಿತ್ತಂತೆ. ಮಾತುಕತೆ ನಂತ್ರ 5 ಕೋಟಿಗೆ ಖರೀದಿಸಿದ್ದಾರೆ ರೋಹಿತ್ ಶರ್ಮಾ.
ಸುನೀಲ್ ಶೆಟ್ಟಿ ಡಿಸ್ಕವರಿ ಯೋಜನೆ 7 ಎಕರೆ ಪ್ರದೇಶದಲ್ಲಿ ನಡೆಯುತ್ತಿದೆ. ಇದರಲ್ಲಿ 21ಕ್ಕೂ ಹೆಚ್ಚು ಬಂಗಲೆಗಳಿವೆ. ಮುಂಬೈನ ಅನೇಕ ದಿಗ್ಗಜರು ಇಲ್ಲಿ ಬಂಗಲೆ ಖರೀದಿಸಿದ್ದಾರೆ.