ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತು ಸಾರ್ವಜನಿಕವಾಗಿ ತೆರೆದಿಡುವುದು ಬಹು ಅಪರೂಪ. ಅದರಲ್ಲೂ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿರುವ ಚಲನಚಿತ್ರ ನಟ- ನಟಿಯರು ವೈಯಕ್ತಿಕ ವಿಚಾರಗಳನ್ನು ಗುಟ್ಟಾಗಿಡಲು ಬಯಸುತ್ತಾರೆ. ಆದರೆ ಕೆಲವರು ಇದಕ್ಕೆ ಹೊರತಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕತ್ರೀನಾ ಕೈಫ್ ಜೊತೆಗಿನ ಬ್ರೇಕ್ ಅಪ್ ಕುರಿತು ಮುಕ್ತವಾಗಿ ಮಾತನಾಡಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ಇದೀಗ ಸಂದರ್ಶನವೊಂದರಲ್ಲಿ ತಮಗಿರುವ ಕೆಟ್ಟ ಚಟವೊಂದರ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ತಾವು ಮದ್ಯವನ್ನು ಕೊಂಚ ಜಾಸ್ತಿ ಸೇವಿಸುತ್ತಿರುವುದಾಗಿ ಹೇಳಿಕೊಂಡಿರುವ ರಣಬೀರ್ ಕಪೂರ್ ಇದು ಒಳ್ಳೆಯದಲ್ಲ ಎಂಬುದರ ಅರಿವು ತಮಗಿದೆ ಎಂದಿದ್ದಾರೆ. ಅಂದ ಹಾಗೆ ರಣಬೀರ್ ಕಪೂರ್ ಕೋಲ್ಡ್ ಡ್ರಾಟ್ ಬಿಯರ್ ಅನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಈ ಚಟವನ್ನು ತೊರೆಯಲು ತಾವು ಬಯಸುವುದಾಗಿ ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ.