ಭುವನೇಶ್ವರ: ಕಾಟ ಕೊಟ್ಟ ಮಂಗಳಮುಖಿಯರ ಮೇಲೆ, ಯುವಕರ ಗುಂಪೊಂದು ಅಮಾನವೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಮಂಗಳಮುಖಿಯರ ಸಂಘಟನೆ ಒತ್ತಾಯಿಸಿದೆ.
ಒಡಿಶಾದ ಮಾಲ್ಕನ್ ಗಿರಿ ಜಿಲ್ಲೆಯ ನಾಯಕ್ ಗುಡಾದಲ್ಲಿ ಇಬ್ಬರು ಮಂಗಳಮುಖಿಯರನ್ನು ನಡುರಸ್ತೆಯಲ್ಲೇ ಥಳಿಸಲಾಗಿದೆ. ಯುವಕರ ಗುಂಪೊಂದು ಅವರನ್ನು ಥಳಿಸಿ ಬಟ್ಟೆಯನ್ನು ಹರಿದುಹಾಕಿದೆ. ಬಸ್ ನಲ್ಲಿ ಪ್ರಯಾಣಿಕರಿಂದ ಮಂಗಳಮುಖಿಯರು ಕೇಳಿ ಹಣ ಪಡೆಯುತ್ತಿದ್ದರು. ಕೆಲವರು ಹಣ ಕೊಟ್ಟರೆ ಮತ್ತೆ ಕೆಲವರು ಹಣ ಕೊಡದೇ ಸುಮ್ಮನೆ ಕುಳಿತಿದ್ದಾರೆ. ಆಗ ಹಣ ಕೊಡದ ಪ್ರಯಾಣಿಕರಿಗೆ ಮಂಗಳಮುಖಿಯರು ಶಾಪ ಹಾಕಿದ್ದಾರೆ.
ಇದರಿಂದ ಆಕ್ರೋಶಗೊಂಡ ಕೆಲವರು, ಬಸ್ ನಿಲ್ಲಿಸಿ, ನಡು ರಸ್ತೆಯಲ್ಲೇ ಮಂಗಳಮುಖಿಯರ ಬಟ್ಟೆ ಹರಿದು ಹಾಕಿ, ಹಲ್ಲೆ ಮಾಡಿದ್ದಾರೆ. ಇದು ಮಂಗಳಮುಖಿಯರ ಸಂಘದವರಿಗೆ ಗೊತ್ತಾಗಿ ಪ್ರತಿಭಟನೆ ನಡೆಸಿದ್ದಾರೆ.