ನವದೆಹಲಿ: ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹ್ಯಾಝೆಲ್ ಕೀಚ್ ಮದುವೆಯಾಗಲಿದ್ದಾರೆ ಎಂಬುದು ಹಳೆ ವಿಚಾರ. ಈಗ ಭಾವಿ ಪತ್ನಿಯ ವಿಚಾರಕ್ಕೆ ಯುವರಾಜ್ ಕೆಂಡಾಮಂಡಲರಾಗಿದ್ದಾರೆ.
ಯುವರಾಜ್ ಭಾವಿ ಪತ್ನಿಯ ಬಗ್ಗೆ ಅಧಿಕಾರಿಯೊಬ್ಬರು ಜನಾಂಗೀಯ ನಿಂದನೆ ರೀತಿ ಹೇಳಿಕೆ ನೀಡಿದ್ದು, ಇದಕ್ಕೆ ಯುವರಾಜ್ ಸಿಂಗ್ ಕೆಂಮಂಡಲರಾಗಿದ್ದಾರೆ ಎನ್ನಲಾಗಿದೆ. ಹ್ಯಾಝೆಲ್ ಕೀಚ್ ಹೆಸರಿನ ಬಗ್ಗೆ ಗೊಂದಲಕ್ಕೆ ಒಳಗಾದ ಅಧಿಕಾರಿಯೊಬ್ಬರು, ಅವರ ಖಾತೆಗೆ ಹಣ ವರ್ಗಾವಣೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ. ಈ ಬಗ್ಗೆ ಹ್ಯಾಝೆಲ್ ಕೀಚ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾವಿ ಪತ್ನಿಯ ಜನಾಂಗೀಯ ನಿಂದನೆ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಯುವರಾಜ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.