ಸ್ಯಾಮ್ ಸಂಗ್ ತನ್ನ ಹೊಚ್ಚ ಹೊಸ ಶ್ರೇಣಿಯ ಸ್ಯಾಮ್ ಸಂಗ್ ಗೇರ್ ಫಿಟ್ 2 ಮತ್ತು ಸ್ಯಾಮ್ ಸಂಗ್ ಗೇರ್ ಐಕಾನ್ ಎಕ್ಸ್ ಅನ್ನು ಬಿಡುಗಡೆಗೊಳಿಸಿದೆ. ಈಗಾಗಲೇ ಫ್ಲಿಫ್ ಕಾರ್ಟ್ ನಲ್ಲಿ ಇದರ ಫ್ರೀ ಬುಕಿಂಗ್ ಆರಂಭಗೊಂಡಿದ್ದು ಇವು ಕ್ರಮವಾಗಿ 13,990 ಮತ್ತು 13,490 ರೂ. ಗೆ ಲಭ್ಯವಾಗಲಿವೆ.
ಸ್ಯಾಮ್ ಸಂಗ್ ಗೇರ್ ಫಿಟ್ 2 ಟೈಜನ್ ಆಪರೇಟಿಂಗ್ ಸಿಸ್ಟಂ ಆಧಾರಿತ ಬಾಗಿದ 1.5 AMOLED ಡಿಸ್ ಪ್ಲೇ ಹೊಂದಿದೆ. ಈ ಮೂಲಕ ಬಳಕೆದಾರನಿಗೆ ಕ್ರೀಡೆ ಮತ್ತು ವ್ಯಾಯಾಮದ ಕುರಿತಾದ ಎಲ್ಲ ಮಾಹಿತಿಗಳನ್ನು ನೀಡುತ್ತದೆ. ಮನರಂಜನೆಗಾಗಿ ಇನ್ ಬಿಲ್ಟ್ ಜಿಪಿಎಸ್ ಹಾಡುಗಳು ಮತ್ತು ಹೃದಯದ ಬಡಿತವನ್ನು ತಿಳಿಸುವ ಮಾನಿಟರ್ ಕೂಡ ಇದರಲ್ಲಿದೆ.
ಐಕಾನ್ ಎಕ್ಸ್ ಕೂಡ ಬಳಕೆದಾರನ ಫಿಟ್ ನೆಸ್ ಕುರಿತಂತೆ ಎಲ್ಲ ಮಾಹಿತಿ ನೀಡುತ್ತದೆ. ಇದು ಕೋರ್ಡ್ ಫ್ರೀ ಈಯರ್ ಬಡ್ಸ್ ಆಗಿದ್ದು, ಧ್ವನಿ ಮಾರ್ಗದರ್ಶಿಯ ಮೂಲಕ ನಾವು ನಮ್ಮ ಶರೀರದಲ್ಲಿನ ಕ್ಯಾಲೊರಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ನಡಿಗೆಯ ವೇಗ, ಮಿತಿ, ದೂರ ಇವೆಲ್ಲವುಗಳ ಕುರಿತಾದ ವಿವರಗಳನ್ನು ಐಕಾನ್ ಎಕ್ಸ್ ನೀಡುತ್ತದೆ.
ಈ ಎರಡೂ ಫಿಟ್ ನೆಸ್ ಬ್ಯಾಂಡ್ ಗಳು 4ಜಿಬಿಯ ಆಂತರಿಕ ಮೆಮೊರಿ ಹೊಂದಿವೆ. ಇದರ ಸಹಾಯದಿಂದ ಸುಮಾರು 1000 ಹಾಡುಗಳನ್ನು ಸ್ಟೋರ್ ಮಾಡಬಹುದು. ಬ್ಲೂ ಟೂತ್ ಕನೆಕ್ಟಿವಿಟಿ ಮತ್ತು ಆರೋಗ್ಯ, ಕ್ರೀಡೆಗೆ ಸಂಬಂಧಪಟ್ಟ ಎಲ್ಲ ಅಪ್ಲಿಕೇಶನ್ ಗಳು ಬಳಕೆದಾರನಿಗೆ ಲಭ್ಯವಾಗಲಿವೆ.