ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್, ನಾಯಕನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ‘ಜಾಗ್ವಾರ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
ಕನ್ನಡ ಹಾಗೂ ತೆಲುಗಿನಲ್ಲಿ ಬಹುಕೋಟಿ ವೆಚ್ಛದಲ್ಲಿ ನಿರ್ಮಾಣವಾಗಿರುವ ‘ಜಾಗ್ವಾರ್’ ಟ್ರೈಲರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಇದೀಗ ಸೆಪ್ಟಂಬರ್ 2 ರಂದು ಮಂಡ್ಯದಲ್ಲಿ ಚಿತ್ರದ ಆಡಿಯೋ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಲಹರಿ ಸಂಸ್ಥೆ, ಚಿತ್ರದ ಆಡಿಯೋ ಹಕ್ಕನ್ನು 1.08 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಶಿಷ್ಯ ಮಹಾದೇವ್ ‘ಜಾಗ್ವಾರ್’ ನಿರ್ದೇಶನ ಮಾಡಿದ್ದಾರೆ.
ಖ್ಯಾತ ಕತೆಗಾರ ವಿಜಯೇಂದ್ರ ಪ್ರಸಾದ್ ಅವರು ಕತೆ ಬರೆದಿದ್ದು, ಎಸ್.ಎಸ್. ಥಮನ್ ಸಂಗೀತ ನೀಡಿದ್ದಾರೆ. ‘ಜಾಗ್ವಾರ್’ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದು, ಸೆಪ್ಟಂಬರ್ 2 ರಂದು ಮಂಡ್ಯದಲ್ಲಿ ಆಡಿಯೋ ರಿಲೀಸ್ ಆಗಲಿದೆ.