ಬೆಂಗಳೂರು: ಮನೆಯಲ್ಲಿ ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 24 ವರ್ಷದ ಪುನೀತ್ ನನ್ನು ಶಿರಸಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿಯಲ್ಲಿ ಆಗಸ್ಟ್ 25 ರಂದು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ನುಗ್ಗಿದ್ದ ಪುನೀತ್, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆ ಪ್ರತಿರೋಧ ತೋರಿದಾಗ ಕೆನ್ನೆ ಕಚ್ಚಿ ಪರಾರಿಯಾಗಿದ್ದಾನೆ. ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಸಮೀಪದಲ್ಲೇ ವಾಸವಾಗಿದ್ದ ಮಹಿಳೆ ಮೇಲೆ ಕಣ್ಣು ಹಾಕಿದ್ದ. ಡಾರ್ಜಲಿಂಗ್ ಮೂಲದ ಮಹಿಳೆ, ಸಹೋದರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಆಕೆ ಬಾಗಿಲು ಹಾಕದೇ ಮಲಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಪುನೀತ್, ಅನುಚಿತವಾಗಿ ವರ್ತಿಸಿ, ಕೆನ್ನೆ ಕಚ್ಚಿ ಪರಾರಿಯಾಗಿದ್ದ. ಹೆಚ್.ಎ.ಎಲ್. ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.