ಕಾರ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಹೊಸ ಯಾವ ಕಾರ್ ಮಾರುಕಟ್ಟೆಗೆ ಬಂದಿದೆ,ಯಾವುದನ್ನು ಕೊಂಡ್ರೆ ಬೆಸ್ಟ್ ಅಂತಾ ಯೋಚನೆ ಮಾಡುವ ಕಾರ್ ಪ್ರೇಮಿ ಗಳು ಈ ಸುದ್ದಿಯನ್ನು ಓದಲೇಬೇಕು.
ಅನೇಕ ಸಮಯದ ನಂತ್ರ ಅಮೆರಿಕಾ ಕಂಪನಿ ಜೀಪ್, ಭಾರತದಲ್ಲಿ ಎಸ್ ಯುವಿಯ Jeep Wrangler ಮತ್ತು Jeep Grand Cherokee ಕಾರ್ ಬಿಡುಗಡೆ ಮಾಡಿದೆ. ಜೀಪ್ ರ್ಯಾಂಗ್ಲರ್ ಆರಂಭಿಕ ಬೆಲೆ 71.59 ಲಕ್ಷ. ಇನ್ನು ಜೀಪ್ ಗ್ರ್ಯಾಂಡ್ ಚೆರೋಕೀ ಆರಂಭಿಕ ಬೆಲೆ 93.64 ಲಕ್ಷ.
ಕಂಪನಿ ಈ ಕಾರುಗಳನ್ನು ದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ಪೋ ನಲ್ಲಿ ಪರಿಚಯಿಸಿತ್ತು. ಈ ಎರಡು ಕಾರುಗಳನ್ನು ಸಿಬಿಯು ಮಾದರಿಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು. ಕಾರಿನ ಶೈಲಿ ನೋಡಿ, ಕಾರನ್ನು ಹಾಳಾದ ರಸ್ತೆ ಅಥವಾ ಮಣ್ಣಿನ ರಸ್ತೆಯಲ್ಲಿ ಬಿಡುಗಡೆ ಮಾಡಲಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಜೋದ್ಪುರದ ಬಂಗಲೆಯಲ್ಲಿ ಲಾಂಚ್ ಮಾಡಲಾಗಿದೆ.