ತುಮಕೂರು: ಈಗಾಗಲೇ 2 ಮದುವೆಯಾಗಿ ಪತ್ನಿಯರಿಂದ ದೂರವಾಗಿದ್ದ ಭೂಪನೊಬ್ಬ, 3 ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾಗಲೇ ಸಿಕ್ಕಿಬಿದ್ದು, ಧರ್ಮದೇಟು ತಿಂದ ಘಟನೆ ತುಮಕೂರಿನಲ್ಲಿ ನಡೆದಿದೆ.
ತಮುಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಂಕಾಪುರ ಗ್ರಾಮದ ಮಹಮ್ಮದ್ ಪೀರ್ ಹಲ್ಲೆಗೊಳಗಾದವ. ಪೇಂಟರ್ ಕೆಲಸ ಮಾಡುತ್ತಿದ್ದ ಪೀರ್, ಈ ಹಿಂದೆಯೇ ಇಬ್ಬರನ್ನು ಮದುವೆಯಾಗಿದ್ದು, ಅವರನ್ನು ತೊರೆದಿದ್ದ. ಮೂರನೇ ಮದುವೆಗೆ ಮುಂದಾಗಿದ್ದು, ತುಮಕೂರು ಶಾಂತಿನಗರದ ಯುವತಿಯನ್ನು ನೋಡಿ ಮದುವೆಗೆ ಸಿದ್ಧತೆ ನಡೆಸಿದ್ದು, ಯುವತಿಯ ಮನೆಯವರಿಂದ ವರದಕ್ಷಿಣೆ ಕೂಡ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ಕೊನೆಗೆ ಯುವತಿಯ ಮನೆಯವರಿಗೆ ವಿಷಯ ಗೊತ್ತಾಗಿ ಮಹಮ್ಮದ್ ಪೀರ್ ನನ್ನು ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ ಭೂಪನನ್ನು ತುಮಕೂರು ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.