ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಿ ನಾಳೆಯಿಂದ ಆರಂಭವಾಗ್ತಿದೆ. ಯುಎಸ್ ಓಪನ್ ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಕನೆಕ್ಟಿಕಟ್ ಓಪನ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಸಾನಿಯಾ ಮಿರ್ಜಾ ಹಾಗೂ ರೊಮೇನಿಯಾದ ಮೋನಿಕಾ ನಿಕಲೆಸ್ಕು ಜೋಡಿ ಫೈನಲ್ ನಲ್ಲಿ ಉಕ್ರೇನ್ ನ ಕೆತರಿನಾ ಬೊಂಡರೆಕೋ ಹಾಗೂ ತೈವಾನ್ ನ ಚುವಾಂಗ್ ಚೈ ಜುಂಗ್ ವಿರುದ್ಧ ಜಯ ಸಾಧಿಸಿದೆ.
ಒಂದೂವರೆ ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಹಾಗೂ ಮೋನಿಕಾ ಜೋಡಿ, 7-5, 6-4 ನೇರ ಸೆಟ್ ಗಳಿಂದ ಗೆಲುವಿನ ನಗೆ ಬೀರಿದೆ. ಯಶಸ್ವಿ ಜೋಡಿಯೆಂದು ಹೆಸರಾಗಿದ್ದ ಮಾರ್ಟಿನಾ ಹಿಂಗಿಸ್ ಹಾಗೂ ಸಾನಿಯಾ ಮಿರ್ಜಾ ಇತ್ತೀಚೆಗಷ್ಟೆ ಬೇರೆಯಾಗಿದ್ದಾರೆ. ಅದಾದ ಬಳಿಕ ಸಾನಿಯಾ ಬೇರೆ ಬೇರೆ ಆಟಗಾರ್ತಿಯರ ಜೊತೆ ಡಬಲ್ಸ್ ಆಡುತ್ತಿದ್ದಾರೆ. ಡಬಲ್ಸ್ ನಲ್ಲಿ ಅಗ್ರ ಶ್ರೇಯಾಂಕಿತ ಸಾನಿಯಾ ಮಿರ್ಜಾ, ಯುಎಸ್ ಓಪನ್ ನಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.