ಇಸ್ಲಾಮಾಬಾದ್: ಬ್ರೇಕಿಂಗ್ ನ್ಯೂಸ್ ಕೊಡುವ ಧಾವಂತದಲ್ಲಿ ಟಿ.ಆರ್.ಪಿ. ಪೈಪೋಟಿಯಲ್ಲಿ ಟಿ.ವಿ. ವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ ದಂಡ ಕಟ್ಟುವಂತಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ತೆಹ್ರಿಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರು 3 ನೇ ಮದುವೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ 13 ಟಿ.ವಿ. ಚಾನಲ್ ಗಳಿಗೆ ದಂಡ ವಿಧಿಸಲಾಗಿದೆ. 63 ವರ್ಷದ ಇಮ್ರಾನ್ ಖಾನ್ ಲಂಡನ್ ನಲ್ಲಿ 3 ನೇ ಮದುವೆಯಾಗಿದ್ದಾರೆ ಎಂದು ಕೆಲವು ವಾಹಿನಿಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದ್ದು, ಈ ಬಗ್ಗೆ ಪಾಕ್ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮ್ರಾನ್ ಖಾನ್ ದೂರು ನೀಡಿದ್ದರು.
ಕೆಲ ದಿನಗಳ ನಂತರದಲ್ಲಿ ಇಮ್ರಾನ್ ಖಾನ್ ತಮ್ಮ ದೂರನ್ನು ವಾಪಸ್ ಪಡೆದರೂ, ಪ್ರಾಧಿಕಾರ, ಟಿ.ವಿ. ವಾಹಿನಿಗಳ ಸುಳ್ಳು ಸುದ್ದಿ ಬಗ್ಗೆ ಆಕ್ಷೇಪಿಸಿ, 5 ಲಕ್ಷ ರೂ. ದಂಡ ವಿಧಿಸಿದೆ. ನಿಯಮ ಉಲ್ಲಂಘಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.