ಹೆರಿಗೆಯಾದ ನಂತ್ರ ಕೆಲ ತಿಂಗಳು ವಿಶ್ರಾಂತಿ ಬೇಕಾಗುತ್ತದೆ. ಆಹಾರ, ಆರೋಗ್ಯದ ಜೊತೆಗೆ ಮಗುವನ್ನು ನೋಡಿಕೊಳ್ಳುವುದರಲ್ಲಿ ಮಹಿಳೆಯರು ತಮ್ಮ ವೃತ್ತಿ ಬದುಕನ್ನು ಮರೆತು ಬಿಡ್ತಾರೆ ಎಂಬ ಮಾತಿದೆ. ಆದ್ರೆ ಇದೆಲ್ಲ ಸುಳ್ಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಭಾರತದ ಸೂಪರ್ ಕರೊಲ್ Gracias.
ಕರೊಲ್ ಗೆ ಹೆರಿಗೆಯಾಗಿ ಇನ್ನೂ ಮೂರು ತಿಂಗಳಾಗಿಲ್ಲ. ಒಂದು ತಿಂಗಳ ಮೇಲೆ ಒಂದು ವಾರವಾಗಿದ್ದು, ಆಗ್ಲೆ ರ್ಯಾಂಪ್ ವಾಕ್ ಮಾಡಿದ್ದಾಳೆ ಕರೊಲ್. ಅಮ್ಮನಾದ್ರೂ ಆಕೆಯ ರ್ಯಾಂಪ್ ವಾಕ್ ನಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಹಿಂದಿನ ಹಾಗೆ ಜಲ್ವಾ ತೋರಿದ್ದಾಳೆ ಕರೊಲ್.
ಲ್ಯಾಕ್ಮೇ ಫ್ಯಾಷನ್ ವೀಕ್ ನ ವಿಂಟರ್ ಸೀಜನ್ ಫ್ಯಾಷನ್ ಶೋನಲ್ಲಿ ಕರೊಲ್ ಪಾಲ್ಗೊಂಡಿದ್ದಳು. ಸೂಪರ್ ಮಾಡೆಲ್ ಜೊತೆ ಸೂಪರ್ ಅಮ್ಮ ಕೂಡ ಆಗಿರುವ ಕರೊಲ್, ಮಗುವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಭಾರತೀಯ ಮಹಿಳೆಯರು ಕುಟುಂಬ, ಮಕ್ಕಳ ಜೊತೆ ವೃತ್ತಿಯನ್ನೂ ನಿಭಾಯಿಸ್ತಾರೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮಗುವನ್ನು ಬಿಟ್ಟು ಹೇಗಿರ್ತಾರೋ ಗೊತ್ತಿಲ್ಲ ಎಂದಿದ್ದಾಳೆ ಕರೊಲ್.