ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಯುವಕನೊಬ್ಬನನ್ನು ಸೇನಾ ನೇಮಕಾತಿಯಿಂದ ಅನರ್ಹಗೊಳಿಸಲಾಗಿದೆ.
ಚೌಹಾಣ್ ಹಾಗೂ ಮೋದಿ ಅಭಿಮಾನಿಯಾಗಿರುವ ಮಧ್ಯಪ್ರದೇಶದ 23 ವರ್ಷದ ಯುವಕ ಸೌರಭ್ ಬಿಲ್ಗಾಯನ್ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಸೂರ್ಯ- ಚಂದ್ರರಿರುವವರೆಗೂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನರೇಂದ್ರ ಮೋದಿ ಹೆಸರು ಇರುತ್ತದೆ ಅಂತಾ ಬರೆಸಿಕೊಂಡಿದ್ದಾನೆ.
ಬೇರೆ ಎಲ್ಲ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ, ಎದೆಯ ಸುತ್ತಳತೆ ನೋಡುವ ಸಂದರ್ಭದಲ್ಲಿ ಟ್ಯಾಟೂ ನೋಡಿ ಅವನನ್ನು ಅನರ್ಹಗೊಳಿಸಲಾಗಿದೆಯಂತೆ. ಈ ಹಿಂದೆ ಕೂಡ ಸೌರಭ್ ಗೆ ಇಂತಹ ಅನುಭವವಾಗಿದೆ. 2014 ರಲ್ಲಿ ಪುಣೆಯಲ್ಲಿ ನೇಮಕಾತಿಗೆ ತೆರಳಿದ್ದಾಗ್ಲೂ ಇದೇ ಕಾರಣಕ್ಕೆ ಅನರ್ಹಗೊಂಡಿದ್ದನಂತೆ. ಸತತವಾಗಿ ನಾನು ಅನರ್ಹರಾಗ್ತಿರೋದ್ರಿಂದ ಮೋದಿ ಹಾಗೂ ಚೌಹಾಣ್ ಅವರನ್ನು ಭೇಟಿಯಾಗುವುದಾಗಿ ಸೌರಭ್ ಹೇಳಿದ್ದಾನೆ. ಶಿವರಾಜ್ ಸಿಂಗ್ ಚೌಹಾಣ್ ಭೇಟಿಗೆ ಪ್ರಯತ್ನಿಸಿದ್ದೆ, ಆದ್ರೆ ಸಾಧ್ಯವಾಗಿಲ್ಲ ಎಂದಿದ್ದಾನೆ ಆತ.