ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್ ಸಂಸ್ಥೆ, ಮಂಗಳವಾರ ಕಡಿಮೆ ಬೆಲೆಯ ಟೈಜನ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಝಡ್ 2 ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಆಗಸ್ಟ್ 29ರ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗುವ ಈ ಫೋನ್ ಬೆಲೆ 4,590 ರೂ. ಗಳಾಗಿವೆ.
ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ಎಲ್ಲ ಸ್ಮಾರ್ಟ್ ಫೋನ್ ಗಳ ಬೆಲೆ 5,000 ವನ್ನು ಮೀರಿದೆ. ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಫೋನ್ ವಿತರಿಸಬೇಕೆಂಬ ನಿಟ್ಟಿನಲ್ಲಿ ಸ್ಯಾಮ್ ಸಂಗ್ ಹೊಸ ಫೋನ್ ಬಿಡುಗಡೆಗೊಳಿಸಿದೆ.
ಝಡ್ 2 ಮೊಬೈಲ್ ಜೊತೆ ಉಚಿತ ಜಿಯೋ 4ಜಿ ಸಿಮ್ ಮತ್ತು 3 ತಿಂಗಳ ಉಚಿತ ಡೇಟಾ ಹಾಗೂ ಕರೆ ಸೌಲಭ್ಯಗಳು ಸಿಗಲಿದೆ. 4 ಇಂಚಿನ ಸ್ಕ್ರೀನ್, 1.5 ಗಿಗಾ ಹರ್ಟ್ಜ್ ಕ್ವಾಡ್ ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್, 8 ಜಿಬಿ ಇಂಟರ್ನಲ್ ಮೆಮೊರಿ, 5 ಮೆಗಾ ಪಿಕ್ಸೆಲ್ ಕ್ಯಾಮರಾ, 1500 ಎಂಎಎಚ್ ಬ್ಯಾಟರಿ ಸೌಲಭ್ಯ ಇರಲಿದೆ. ಅಲ್ಟ್ರಾ ಡಾಟಾ ಸೇವಿಂಗ್, ಎಸ್ ಬೈಕ್ ಮೋಡ್, ಮೈ ಮನಿ ಟ್ರಾನ್ಸ್ ಫರ್ ಆಪ್ ಗಳು ಇವೆ. ಇವೆಲ್ಲದರ ಜೊತೆ ಕನ್ನಡ ಭಾಷೆ ಸೇರಿದಂತೆ ಒಟ್ಟು 12 ಭಾರತೀಯ ಭಾಷೆಗಳನ್ನು ಈ ಫೋನ್ ಹೊಂದಿದೆ.