ಆಗಸ್ಟ್ 22 ರಂದು ಮದ್ರಾಸ್ (ಈಗಿನ ಚೆನ್ನೈ) ತನ್ನ 377 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಚೆನ್ನೈನಲ್ಲಿರುವ ಅಮೆರಿಕಾ ರಾಯಭಾರಿ ಕಛೇರಿಯವರು ಇದನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಅಮೆರಿಕಾ ರಾಯಭಾರ ಕಛೇರಿಯ ಸಿಬ್ಬಂದಿ, ಇದನ್ನು ಮೆಸ್ ಒಂದರಲ್ಲಿ ಆಚರಿಸಿದ್ದು, ಪಕ್ಕಾ ದಕ್ಷಿಣ ಭಾರತೀಯ ಶೈಲಿಯಲ್ಲಿ ಬಾಳೆ ಎಲೆಯ ಮೇಲೆ ದಕ್ಷಿಣ ಭಾರತದ ತಿನಿಸುಗಳನ್ನು ಸವಿದಿದ್ದಾರೆ.
ಇದರ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಅಮೆರಿಕನ್ನರ ವಿಶಿಷ್ಟ ರೀತಿಯ ‘ಮದ್ರಾಸ್ ಡೇ’ ಆಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪಕ್ಕಾ ದಕ್ಷಿಣ ಭಾರತೀಯ ಶೈಲಿಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಊಟ ಸವಿದಿರುವ ಅಮೆರಿಕನ್ನರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.