ಮೈಸೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ, ಭೂ ಹಗರಣ ಕುರಿತು, ಪತ್ರಕರ್ತರು ಪ್ರಶ್ನಿಸಿದ ಸಂದರ್ಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಗರಂ ಆದ ಘಟನೆ ನಡೆದಿದೆ.
ಕಾಗೋಡು ತಿಮ್ಮಪ್ಪ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ, ಅರವಿಂದ್ ಜಾಧವ್ ಅವರ ತಾಯಿ ಹೆಸರಿಗೆ ಸರ್ಕಾರಿ ಜಮೀನು ಪೋಡಿ ಮಾಡಿಕೊಡುವ ವಿಚಾರ ಕುರಿತಂತೆ ಪ್ರಶ್ನಿಸಲಾಗಿದೆ. ಆಗ ಕಾಗೋಡು ತಿಮ್ಮಪ್ಪನವರು, ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬೆಂಗಳೂರಿಗೆ ಹೋದ ನಂತರ, ಮುಖ್ಯಮಂತ್ರಿಯವರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಭೂ ಕಬಳಿಕೆ ಮಾಡಿರುವ ಕುರಿತು ನನಗೆ ಮಾಹಿತಿ ಇಲ್ಲ. ಸಚಿವನಾದ ಕೂಡಲೇ ಎಲ್ಲವನ್ನೂ ತಿಳಿದುಕೊಂಡಿರಬೇಕೆಂದೇನೂ ಇಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳುವ ಮೂಲಕ, ಪರೋಕ್ಷವಾಗಿ ಅರವಿಂದ್ ಜಾಧವ್ ಅವರ ಬಗ್ಗೆ ಬ್ಯಾಟಿಂಗ್ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.