ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ. ಬಹುಭಾಷಾ ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಗಳಿಕೆಯಲ್ಲಿ ಹಿಂದಿನ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದೆ ಎಂದು ಹೇಳಲಾಗಿದೆ.
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ, ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನ ಮಾಡಿರುವ ‘ಕೋಟಿಗೊಬ್ಬ-2’ ರಿಲೀಸ್ ಆದ 11 ದಿನದಲ್ಲಿ ಸುಮಾರು 30 ಕೋಟಿ ರೂ. ಗಳಿಸಿದೆ. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದಕ್ಕೆ ಚಿತ್ರ ತಂಡ ಸಂತಸ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಸುದೀಪ್, ನಿತ್ಯಾ ಮೆನನ್, ಚಿಕ್ಕಣ್ಣ, ರವಿಶಂಕರ್ ಮೊದಲಾದವರು ನಟಿಸಿರುವ ‘ಕೋಟಿಗೊಬ್ಬ-2’ ತಮಿಳಿನಲ್ಲಿಯೂ ನಿರ್ಮಾಣವಾಗಿ, ಯಶಸ್ವಿಯಾಗಿದೆ. ರಾಜ್ಯದಲ್ಲಿ ಸುಮಾರು 385 ಸೆಂಟರ್ ಗಳಲ್ಲಿ ‘ಕೋಟಿಗೊಬ್ಬ-2’ ರಿಲೀಸ್ ಆಗಿತ್ತು.