ನಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುತ್ತೆ ಅನ್ನೋ ಮಾತು ಸುಳ್ಳು. ಇದಕ್ಕೆ ತಾಜಾ ನಿದರ್ಶನ ಅಂದ್ರೆ ಉತ್ತರ ಪ್ರದೇಶ. ಇಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ತಾಂಡವವಾಡುತ್ತಿದೆ ಅಂದ್ರೆ ಎಂಬಿಎ, ಎಂಜಿನಿಯರಿಂಗ್ ಪದವೀಧರರೆಲ್ಲ ಕಸ ಗುಡಿಸುವ ಕೆಲಸಕ್ಕಾಗಿ ಅರ್ಜಿ ಹಾಕಿದ್ದಾರೆ.
ಅಲಹಾಬಾದ್ ನಲ್ಲಿ 119 ಸ್ವೀಪರ್ ಪೋಸ್ಟ್ ಖಾಲಿ ಇದ್ದು, ಇದಕ್ಕಾಗಿ 1.10 ಲಕ್ಷ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿರುವವರಲ್ಲಿ ಎಂಬಿಎ ಪದವೀಧರರು ಮತ್ತು ಎಂಜಿನಿಯರ್ ಗಳು ಕೂಡ ಇದ್ದಾರೆ.
ಈ ಕೆಲಸಕ್ಕೆ ಯಾವುದೇ ಪದವಿಯ ಅಗತ್ಯವಿಲ್ಲ, ರಸ್ತೆ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು, ಮುನ್ಸಿಪಲ್ ಕಾಲುವೆಗಳ ನಿರ್ವಹಣೆ ಸ್ವೀಪರ್ ಗಳ ಕೆಲಸ. ಒಂದು ಹುದ್ದೆಗೆ ಸರಾಸರಿ 925 ಅರ್ಜಿಗಳು ಬಂದಿವೆ. ಅದರರ್ಥ ಉತ್ತರ ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಎಂಬಿಎ ಪದವೀಧರರು, ಎಂಜಿನಿಯರ್ ಗಳಿದ್ದಾರೆ. ಉನ್ನತ ಶಿಕ್ಷಣ ಪಡೆದವರೆಲ್ಲ ಕಸ ಗುಡಿಸುವ ಕೆಲಸಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ತಂದಿದೆ ಅಂತಾ ನೇಮಕಾತಿ ಸಮಿತಿಯ ಅಧ್ಯಕ್ಷ ಶೇಷ್ ಮಣಿ ಪಾಂಡೆ ತಿಳಿಸಿದ್ದಾರೆ.