Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಕೇವಲ 24 ಗಂಟೆಯಲ್ಲಿ ಮೊಡವೆಗೆ ಹೇಳಿ ಗುಡ್ ಬೈ

$
0
0
ಕೇವಲ 24 ಗಂಟೆಯಲ್ಲಿ ಮೊಡವೆಗೆ ಹೇಳಿ ಗುಡ್ ಬೈ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳು ನಮ್ಮನ್ನು ಕಾಡ್ತಾ ಇವೆ. ಅದ್ರಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮೊಡವೆ.

ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. ಆದ್ರೆ ಪಾರ್ಟಿಗೆ ಹೋಗಬೇಕೆಂದಾಗ, ಯಾವುದೋ ಬಹುಮುಖ್ಯ ಸಮಾರಂಭವಿದ್ದಾಗಲೇ ಮುಖದ ಮೇಲೆ ಮೊಡವೆ ಎದ್ದು ಬಿಡುತ್ತದೆ. ಇದು ನಮ್ಮ ಸಂತೋಷಕ್ಕೆ ಕಪ್ಪು ಚುಕ್ಕಿಯಾಗ್ಬಿಡುತ್ತದೆ.

ಮೊಡವೆ ಹೋಗಲಾಡಿಸಲು ಕೆಲವೊಂದು ಮನೆ ಮದ್ದುಗಳಿವೆ. 24 ಗಂಟೆಯೊಳಗೆ ನಿಮ್ಮ ಮುಖದ ಮೇಲಿದ್ದ ಮೊಡವೆಗಳು ಮಾಯವಾಗ್ಬಿಡ್ತವೆ. ಅಂತ ಔಷಧಿಗಳನ್ನು ನಾವು ಹೇಳ್ತೇವೆ ಕೇಳಿ.

ಜೇನು ತುಪ್ಪ : ಸಾಕಷ್ಟು ಸೌಂದರ್ಯದ ಗುಣಹೊಂದಿರುವ ಜೇನು ತುಪ್ಪ ಮೊಡವೆ ಹೋಗಲಾಡಿಸಲು ಸಹಕಾರಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿರುತ್ತದೆ. ರಾತ್ರಿ ಮೊಡವೆಯಾದ ಜಾಗಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಚ್ಚಿ. ನಂತ್ರ ಬ್ಯಾಂಡೇಜ್ ನಿಂದ ಕವರ್ ಮಾಡಿ. ರಾತ್ರಿ ಪೂರ್ತಿ ಹಾಗೆ ಇರಲಿ. ಬೆಳಿಗ್ಗೆ ಎದ್ದ ತಕ್ಷಣ ಬ್ಯಾಂಡೇಜ್ ತೆಗೆದು ಮುಖವನ್ನು ತೊಳೆಯಿರಿ. ನಿಮ್ಮ ಮೊಡವೆ ಮಾಯವಾಗಿರುತ್ತೆ ನೋಡಿ.

ಐಸ್ : ಐಸ್ ನಲ್ಲಿಯೂ ಮೊಡವೆ ಹೋಗಲಾಡಿಸುವ ಶಕ್ತಿ ಇದೆ. ಒಂದು ಬಟ್ಟೆಯನ್ನು ತೆಗೆದುಕೊಂಡು ಅದರೊಳಗೆ ಐಸ್ ಇಡಿ. ನಂತ್ರ ಮೊಡವೆಯಾದ ಜಾಗಕ್ಕೆ ಮಸಾಜ್ ಮಾಡಿ. ದಿನಕ್ಕೆ ನಾಲ್ಕು ಬಾರಿ ಹೀಗೆ ಮಾಡುವುದರಿಂದ ಮೊಡವೆ ಮಾಯವಾಗುತ್ತದೆ.

ಬೆಳ್ಳುಳ್ಳಿ : ಅಡುಗೆಯ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಯಾರಿಗೆ ತಿಳಿದಿಲ್ಲ ಹೇಳಿ. ಆರೋಗ್ಯಕ್ಕೆ ಉತ್ತಮವಾಗಿರುವ ಈ ಬೆಳ್ಳುಳ್ಳಿ ಸೌಂದರ್ಯ ವರ್ಧಕವೂ ಹೌದು. ಒಂದು ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅದನ್ನು ಅರ್ಧಕ್ಕೆ ಕಟ್ ಮಾಡಿ. ನಂತ್ರ ಮೊಡವೆಯಾಗಿರುವ ಜಾಗಕ್ಕೆ ಮಜಾಜ್ ಮಾಡಿ. ರಾತ್ರಿ ಪೂರ್ತಿ ಅದು ಮುಖದ ಮೇಲೆಯೇ ಇರಲಿ. ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆಯಿರಿ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>