ವೇಗದ ಓಟಗಾರ ಉಸೇನ್ ಬೋಲ್ಟ್ ಸದ್ಯ ಸುದ್ದಿಯಲ್ಲಿದ್ದಾರೆ. ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಓಟಗಾರ ಬೇರೆ ವಿಚಾರಕ್ಕೆ ಚರ್ಚೆಯಲ್ಲಿದ್ದಾರೆ. ಬೋಲ್ಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 20 ವರ್ಷದ ಹುಡುಗಿ ಜೊತೆ ಬೋಲ್ಟ್ ಹಾಸಿಗೆ ಮೇಲಿರುವ ವಾಟ್ಸಾಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಆಗಸ್ಟ್ 21 ರಂದು ಬೋಲ್ಟ್ 30 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜೂಡಿ ಡುವಾರ್ಟೆ ಹೆಸರಿನ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾಳೆ. ಒಂದು ಫೋಟೋದಲ್ಲಿ ಹುಡುಗಿಗೆ ಬೋಲ್ಟ್ ಕಿಸ್ ಮಾಡ್ತಿದ್ದಾನೆ. ನನ್ನ ಹಾಗೂ ಬೋಲ್ಟ್ ನಡುವೆ ಏನು ನಡೆದಿದೆಯೋ ಅದು ನಾರ್ಮಲ್. ಪ್ರಸಿದ್ಧ ಕ್ರೀಡಾಪಟುವಿನ ಜೊತೆಗಿದ್ದೇನೆಂದು ನನಗೆ ಅನ್ನಿಸಲಿಲ್ಲ ಎನ್ನುತ್ತಾಳೆ ಜೂಡಿ.