ವಾರ ಪೂರ್ತಿ ಒತ್ತಡದಲ್ಲಿ ಕೆಲಸ ಮಾಡುವ ಜನರು ವೀಕೆಂಡ್ ನಲ್ಲಿ ನೆಮ್ಮದಿ ಬಯಸ್ತಾರೆ. ಕೆಲವರು ಮನೆಯಲ್ಲಿ ಕಾಲ ಕಳೆದ್ರೆ ಮತ್ತೆ ಕೆಲವರು ಫಿಲ್ಮ್, ಶಾಪಿಂಗ್ ಅಂತಾ ಸುತ್ತಾಡ್ತಾರೆ. ಇನ್ನೂ ಕೆಲವರಿಗೆ ಲಾಂಗ್ ಡ್ರೈವ್ ಹೋಗುವ ಹವ್ಯಾಸವಿರುತ್ತದೆ. ವಯಸ್ಸು 30 ದಾಟುವ ಮುನ್ನ ಈ ಮಾರ್ಗದಲ್ಲಿ ಒಮ್ಮೆಯಾದ್ರೂ ಬೈಕ್ ಅಥವಾ ಕಾರ್ ಮೂಲಕ ಸುತ್ತಾಡಿ ಬನ್ನಿ.
ಮನಾಲಿಯಿಂದ ಲೆಹ್: ಕಡಿದಾದ ರಸ್ತೆ, ಸುತ್ತಲೂ ಹಿಮದ ರಾಶಿ. ಕಣ್ಮನ ಸೆಳೆಯುವ ಹಿಮದ ಗುಡ್ಡ.. ಬೆಳ್ಳ ಬೆಳ್ಳಗಿನ ಹಿಮದ ನಡುವೆ ಬೈಕ್ ನಲ್ಲಿ ಪ್ರಯಾಣ ಮಾಡ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ‘ಜಬ್ ವಿ ಮೆಟ್’ ಚಿತ್ರದ ‘ಯೆ ಇಷ್ಕ ಹೈ’ ಹಾಡನ್ನು ಇಲ್ಲಿಯೇ ಚಿತ್ರೀಕರಿಸಲಾಗಿದೆ. ಈ ರಮಣೀಯ ಸ್ಥಳವನ್ನು ಬೈಕ್ ನಲ್ಲಿ ಸುತ್ತಾಡಿದ್ರೆ ಸಿಗುವ ಖುಷಿ ದುಪ್ಪಟ್ಟು.
ಪ್ರಯಾಣದ ದೂರ: 490 ಕಿ.ಮೀ
ತೆಗೆದುಕೊಳ್ಳುವ ಸಮಯ : 10-12 ಗಂಟೆ
ಈಸ್ಟ್ ಕೋಸ್ಟ್ ರಸ್ತೆ ಮೂಲಕ ಚೆನ್ನೈ ಟು ಪಾಂಡಿಚೇರಿ : ಸಾಕಷ್ಟು ನೆನಪುಗಳನ್ನು ನೀವು ಇಲ್ಲಿಂದ ಮೂಟೆ ಕಟ್ಟಿಕೊಂಡು ಬರಬಹುದು. ಫೋಟೋ ಶೂಟ್ ಗೆ ಸುಂದರ ಸ್ಥಳ.
ಪ್ರಯಾಣದ ದೂರ: 152 ಕಿ.ಮೀ
ತೆಗೆದುಕೊಳ್ಳುವ ಸಮಯ : 3 ಗಂಟೆ
ಮುಂಬೈ ಟು ಗೋವಾ: ಯಸ್ ಮುಂಬೈ ಟು ಗೋವಾಕ್ಕೆ ಹೊರಡಲು ಸಿದ್ಧರಾಗಿ. ‘ದಿಲ್ ಚಾಹತಾ ಹೈ’ ಯಂಗ್ ಗ್ಯಾಂಗ್ ಪ್ರಯಾಣಕ್ಕೆ ಇದು ಸೂಕ್ತ ಮಾರ್ಗ.
ಪ್ರಯಾಣದ ದೂರ: 409 ಕಿ.ಮೀ.
ತೆಗೆದುಕೊಳ್ಳುವ ಸಮಯ : 5 ಗಂಟೆ
ಚೆನ್ನೈ ಟು ಮುನ್ನಾರ್: ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಬಯಸಿದ್ದರೆ ಈಗಲೇ ಮುನ್ನಾರ್ ಗೆ ಪ್ರಯಾಣ ಬೆಳೆಸಿ. 6000 ಅಡಿ ಎತ್ತರದಲ್ಲಿರುವ ಮುನ್ನಾರ್ ಖಂಡಿತವಾಗಿಯೂ ರೋಮಾಂಚನ ನೀಡುವ ಸ್ಥಳ. ತಂಪನೆಯ ವಾತಾವರಣ, ಪ್ಯಾರಾ ಗ್ಲೈಡಿಂಗ್ ಇಲ್ಲಿನ ಆಕರ್ಷಣೆ.
ಪ್ರಯಾಣದ ದೂರ: 575 ಕಿ.ಮೀ.
ತೆಗೆದುಕೊಳ್ಳುವ ಸಮಯ : 11 ಗಂಟೆ
ಗೌಹಾತಿ ಟು ತವಾಂಗ್ : ಸಾಹಸಗಳಲ್ಲಿ ನಿಮಗೆ ಆಸಕ್ತಿ ಇದೆಯಾ? ಸವಾಲುಗಳನ್ನು ಇಷ್ಟ ಪಡ್ತೀರಾ? ಹಾಗಿದ್ರೆ ಈ ರಸ್ತೆ ಆಯ್ದುಕೊಳ್ಳಿ.
ಪ್ರಯಾಣದ ದೂರ: 508 ಕಿ.ಮೀ.
ತೆಗೆದುಕೊಳ್ಳುವ ಸಮಯ : 13 ಗಂಟೆ